ಮೇರಿ ಮುಡಿಗೆ ಎಐಬಿಎ ಗರಿ

Published : Nov 25, 2016, 04:31 PM ISTUpdated : Apr 11, 2018, 01:12 PM IST
ಮೇರಿ ಮುಡಿಗೆ ಎಐಬಿಎ ಗರಿ

ಸಾರಾಂಶ

‘‘ನನ್ನನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಎಐಬಿಎ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಕೇವಲ ನನಗಷ್ಟೇ ಅಲ್ಲದೆ, ಭಾರತದ ಯುವ ಬಾಕ್ಸರ್‌ಗಳಿಗೂ ಇದು ಪ್ರೋತ್ಸಾಹದಾಯಕವಾಗಿದೆ’’ - ಮೇರಿ ಕೋಮ್

ನವದೆಹಲಿ(ನ.25): ಭಾರತದ ನಂ.1 ಮಹಿಳಾ ಬಾಕ್ಸರ್ ಮೇರಿ ಕೋಮ್ ಮುಡಿಗೆ ಮತ್ತೊಂದು ಗರಿ ಪ್ರಾಪ್ತಿಯಾಗಿದೆ.

ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ಮುಂದಿನ ತಿಂಗಳು 20ರಂದು ತನ್ನ 70ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಹಾಗೂ ಐದು ಬಾರಿಯ ವಿಶ್ವ ಚಾಂಪಿಯನ್ ಮತ್ತೀಗ ರಾಜ್ಯಸಭೆಯ ಸದಸ್ಯೆಯೂ ಆಗಿರುವ ಮೇರಿ ಕೋಮ್‌ಗೆ ‘ಲೆಜೆಂಡ್ಸ್ ಅವಾರ್ಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.

‘‘ನನ್ನನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಎಐಬಿಎ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಕೇವಲ ನನಗಷ್ಟೇ ಅಲ್ಲದೆ, ಭಾರತದ ಯುವ ಬಾಕ್ಸರ್‌ಗಳಿಗೂ ಇದು ಪ್ರೋತ್ಸಾಹದಾಯಕವಾಗಿದೆ’’ ಎಂದು ಮೇರಿ ಕೋಮ್ ಹೇಳಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಿಂದ ಶುಭ್‌ಮನ್ ಗಿಲ್ ಹೊರಬಿದ್ದ ಬೆನ್ನಲ್ಲೇ ಗೌತಮ್ ಗಂಭೀರ್ ರಿಯಾಕ್ಷನ್ ಹೀಗಿತ್ತು ನೋಡಿ! ವಿಡಿಯೋ ವೈರಲ್
ಟಿ20 ವಿಶ್ವಕಪ್ ತಂಡದಿಂದ ಗಿಲ್‌ಗೆ ಔಟ್: ಅಷ್ಟಕ್ಕೂ ಕೊನೆಯ ಕ್ಷಣದಲ್ಲಿ ಆಯ್ಕೆ ಸಮಿತಿ ಈ ತೀರ್ಮಾನ ಮಾಡಿದ್ದೇಕೆ?