
ಹರಾರೆ(ನ.010): ಶ್ರೀಲಂಕಾದ ಅನುಭವಿ ಸ್ಪಿನ್ನರ್ ರಂಗಣ ಹೆರಾತ್ ಅವರ ಸ್ಪಿನ್ ಮೋಡಿಗೆ ಸಿಲುಕಿದ ಜಿಂಬಾಬ್ವೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ಶರಣಾಗಿದೆ.
ನಾಯಕ ಹೆರಾತ್ ಅವರ ಚಾಣಕ್ಷ ಆಟದಿಂದಾಗಿ ಶ್ರೀಲಂಕಾ 2-0 ಅಂತರದಿಂದ ಜಿಂಬಾಬ್ವೆ ಎದುರು ಸರಣಿ ಜಯಿಸಿದೆ. ಈ ಸರಣಿಯ ಎರಡು ಪಂದ್ಯಗಳಲ್ಲಿ ಹೆರಾತ್ 19 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದಾರೆ.
ಅಕ್ಟೋಬರ್ 29ರಿಂದ ನ.2ರವರೆಗೆ ನಡೆದಿದ್ದ ಮೊದಲ ಪಂದ್ಯದಲ್ಲಿ ಶ್ರೀಲಂಕಾ 225ರನ್‌ಗಳಿಂದ ಜಯ ಸಾಧಿಸಿದ್ದರೆ, ಇದೇ 6ರಿಂದ 10ರವರೆಗೆ ನಡೆದ ಎರಡನೇ ಪಂದ್ಯದಲ್ಲಿ ಪ್ರವಾಸಿ ಲಂಕಾ 257ರನ್‌ಗಳ ಅಂತದಲ್ಲಿ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.
ಶ್ರೀಲಂಕಾ ಕ್ರಿಕೆಟ್ ದಂತಕಥೆ ಮುತ್ತಯ್ಯಾ ಮುರುಳೀಧರನ್ ಹಾಗೂ ಡೇಲ್ ಸ್ಟೇನ್ ನಂತರ ಟೆಸ್ಟ್ ಆಡುವ ಎಲ್ಲಾ ತಂಡಗಳ ಎದುರು ಒಂದೇ ಇನಿಂಗ್ಸ್'ನಲ್ಲಿ ಐದು ವಿಕೆಟ್ ಪಡೆದ ವಿಶ್ವದ ಮೂರನೇ ಆಟಗಾರ ಎಂಬ ಶ್ರೇಯಕ್ಕೂ ರಂಗನಾ ಹೆರಾತ್ ಪಾತ್ರರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.