ವಿಂಬಲ್ಡನ್ ಕದನ: ಫೈನಲ್'ಗೆ ಲಗ್ಗೆಯಿಟ್ಟ ಸಿಲಿಚ್

Published : Jul 14, 2017, 10:18 PM ISTUpdated : Apr 11, 2018, 12:58 PM IST
ವಿಂಬಲ್ಡನ್ ಕದನ: ಫೈನಲ್'ಗೆ ಲಗ್ಗೆಯಿಟ್ಟ ಸಿಲಿಚ್

ಸಾರಾಂಶ

2014ರ ಯುಎಸ್ ಓಪನ್ ಚಾಂಪಿಯನ್ ಸಿಲಿಚ್, ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ಇಲ್ಲವೇ ಥಾಮಸ್ ಬೆರ್ಡಿಚ್ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ.  

ಲಂಡನ್(ಜು.14): ತೀವ್ರ ಕುತೂಹಲ ಕೆರಳಿಸಿದ್ದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌'ನಲ್ಲಿ ಮರಿನ್ ಸಿಲಿಚ್ ಜಯಭೇರಿ ಬಾರಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ಸ್ಯಾಮ್ ಕ್ವೆರ್ರಿ ವಿರುದ್ಧ 6-2(6-8), 6-4, 7-6(7-3), 7-5 ಸೆಟ್'ಗಳಲ್ಲಿ ಗೆಲುವು ಸಾಧಿಸಿದ ಸಿಲಿಚ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಈ ಗೆಲುವಿನ ಮೂಲಕ 2001ರ ನಂತರ ವಿಂಬಲ್ಡನ್ ಫೈನಲ್ ಪ್ರವೇಶಿಸಿದ ಕ್ರೊಯೆಷಿಯಾದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಸಿಲಿಚ್ ಪಾತ್ರರಾಗಿದ್ದಾರೆ.

2014ರ ಯುಎಸ್ ಓಪನ್ ಚಾಂಪಿಯನ್ ಸಿಲಿಚ್, ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ಇಲ್ಲವೇ ಥಾಮಸ್ ಬೆರ್ಡಿಚ್ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಬಳಿಕ 15 ವರ್ಷದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಫೇಲ್; 3 ಪಂದ್ಯಗಳಿಂದ ಗಳಿಸಿದ್ದು ಎಷ್ಟು ರನ್?
ಗುಟ್ಟಾಗಿ ಮದ್ವೆಯಾಗಿದ್ದ ಸೀಕ್ರೆಟ್ ಪತ್ನಿಯ ಕೊಂದ ಪಾಪಿ ಪತಿ! ಇನ್‌ಸ್ಟಾಗ್ರಾಂ ಸ್ಟೋರಿಯಿಂದ ಸಿಕ್ಕಿಬಿದ್ದ