ನಂ.1 ಬ್ಯಾಡ್ಮಿಂಟನ್ ಸ್ಟಾರ್‌ಗೆ ಕ್ಯಾನ್ಸರ್-ತೈವಾನ್‌ನಲ್ಲಿ ಚಿಕಿತ್ಸೆ!

By Web DeskFirst Published Sep 22, 2018, 7:26 PM IST
Highlights

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸೇರಿದಂತೆ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ 3 ಬಾರಿ ಬೆಳ್ಳಿ ಪದಕ, ಕಾಮನ್‌ವಲ್ತ್ ಗೇಮ್ಸ್‌ನಲ್ಲಿ 5 ಬಾರಿ ಚಿನ್ನದ ಪದಕ, ಏಷ್ಯನ್ ಗೇಮ್ಸ್‌ನಲ್ಲಿ 5 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಬ್ಯಾಡ್ಮಿಂಟನ್ ಕ್ಷೇತ್ರದ ನಂ.1 ಪಟು ಇದೀಗ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಈ ಸ್ಟಾರ್ ಪಟು ಯಾರು? ಸದ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ.

ತೈವಾನ್(ಸೆ.22): ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಎದುರಾಳಿಗಳ ವಿರುದ್ದ ಹೋರಾಟ ನಡೆಸುತ್ತಿದ್ದ ಮಲೇಷಿಯಾದ ಸ್ಟಾರ್ ಬ್ಯಾಡ್ಮಿಂಟನ್ ಪಟು ಲೀ ಚಾಂಗ್ ವೈ ಇದೀಗ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಲೀ ಚಾಂಗ್‌ ಮೂಗಿನ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಕ್ಯಾನ್ಸರ್ ಆರಂಭಿಕ ಹಂತದಲ್ಲಿದೆ. ಇದೀಗ ಲೀ ಚಾಂಗ್‌ಗೆ ತೈವಾನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  35 ವರ್ಷದ ಲೀ ಚಾಂಗ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಲೀ ಚಾಂಗ್ ಚಿಕಿತ್ಸೆಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಮಲೇಷಿಯಾ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ನಾರ್ಜಾ ಝಕರಿಯಾ ಹೇಳಿದ್ದಾರೆ.

ಕಳೆದ ಜುಲೈನಿಂದ ಅಭ್ಯಾಸ ನಿಲ್ಲಿಸಿರುವ ಲೀ ಚಾಂಗ್, ಇತ್ತೀಚಿನ ಏಷ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಟೂರ್ನಿಯಿಂದಲೂ ಹಿಂದೆ ಸರಿದಿದ್ದರು. ಇದೀಗ ತೈವಾನ್‌ನಲ್ಲಿ ಲೀ ಚಾಂಗ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ನಂ.1 ಸ್ಥಾನ ಅಲಂಕರಿಸಿದ್ದ ಲೀ ಚಾಂಗ್ ಸದ್ಯ 3ನೇ ಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ 3 ಬಾರಿ ಬೆಳ್ಳಿ ಪದಕ, ಕಾಮನ್‌ವಲ್ತ್ ಗೇಮ್ಸ್‌ನಲ್ಲಿ 5 ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

click me!