ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್ -ಚಿರಾಗ್ ಸೆಮಿಫೈನಲ್‌ಗೆ ಲಗ್ಗೆ

By Naveen Kodase  |  First Published Jan 11, 2025, 8:31 AM IST

ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾದ ಒಂಗ್ ಮತ್ತು ಟಿಯೊ ವಿರುದ್ಧ ಗೆಲುವು ಸಾಧಿಸಿದ ಭಾರತೀಯ ಜೋಡಿ, ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಜೋಡಿಯನ್ನು ಎದುರಿಸಲಿದೆ.


ಕೌಲಾಲಂಪುರ: ಭಾರತದ ತಾರಾ ಡಬಲ್ಸ್ ಜೋಡಿ ಸಾತ್ವಿಕ್ -ಚಿರಾಗ್ ಶೆಟ್ಟಿ ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಕಳೆದ ಬಾರಿ ಟೂರ್ನಿಯಲ್ಲಿ ರನ್ನರ್ -ಅಪ್ ಆಗಿದ್ದ ಭಾರತೀಯ ಜೋಡಿ ಶುಕ್ರವಾರ ನಡೆದ ಈ ಬಾರಿ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾದ ಯೆವ್ ಸಿನ್ ಒಂಗ್ ಹಾಗೂ ಯೇ ಯಿ ಟಿಯೊ ವಿರುದ್ಧ 26-24, 21-15ರಲ್ಲಿ ಗೆಲುವು ಸಾಧಿಸಿತು. ಸೆಮಿಫೈನಲ್‌ನಲ್ಲಿ 7ನೇ ಶ್ರೇಯಾಂಕಿತ ಜೋಡಿಗೆ ದಕ್ಷಿಣ ಕೊರಿಯಾದ ವೊನ್ ಹೊಕಿಮ್ ಹಾಗೂ ಸ್ಯುಂಗ್ ಜಾಯ್
ಸಿಯೊ ಸವಾಲು ಎದುರಾಗಲಿದೆ.

ಕ್ವಾರ್ಟರ್ ಪಂದ್ಯ 49 ನಿಮಿಷಗಳ ಕಾಲ ನಡೆಯಿತು. ಮೊದಲ ಗೇಮ್‌ನಲ್ಲಿ ಒಂದು ಹಂತದಲ್ಲಿ ಭಾರತದ ಜೋಡಿ ಮುನ್ನಡೆ ಯಲ್ಲಿದ್ದರೂ, ಮಲೇಷ್ಯಾದ ಶಟ್ಲರ್‌ಗಳು ಹೋರಾಟ ಬಿಡಲಿಲ್ಲ. ಆದರೆ ಕೊನೆಯಲ್ಲಿ ಸತತ 4 ಗೇಮ್ ಪಾಯಿಂಟ್ ಉಳಿಸಿಕೊಂಡು ಜಯಗಳಿಸಿತು. 2ನೇ ಗೇಮ್‌ನಲ್ಲಿ ಭಾರತಕ್ಕೆ ಸುಲಭ ಗೆಲುವು ಲಭಿಸಿತು.

Tap to resize

Latest Videos

ಇದಕ್ಕೂ ಮೊದಲು ಸಾತ್ವಿಕ್ -ಚಿರಾಗ್ ಶೆಟ್ಟಿ ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಅಜಿಯಾನ್-ಟ್ಯಾನ್ ಡಬ್ಲ್ಯುಕೆ ವಿರುದ್ಧ ಭಾರತೀಯ ಜೋಡಿ 21-15, 21-15ರಲ್ಲಿ ಗೆಲುವು ಸಾಧಿಸಿತು.

'ನನಗೆ ವಿಷ ಹಾಕಿದ್ರು': ಆಸ್ಟ್ರೇಲಿಯನ್ ಓಪನ್‌ಗೂ ಮುನ್ನ ಜೋಕೋ ಗಂಭೀರ ಆರೋಪ!

ಇನ್ನು ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ 32 ವರ್ಷದ ಪ್ರಣಯ್ ಚೀನಾದ ಲಿ ಶಿ ಫೆಂಗ್ ವಿರುದ್ಧ 8-21, 21-15, 21-23ರಲ್ಲಿ ವೀರೋಚಿತ ಸೋಲು ಕಂಡರು. ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಅವರು ಚೀನಾದ ಹ್ಯಾನ್ ಯುವಿರುದ್ದ 18-21, 11-21ರಲ್ಲಿ ಪರಾಭವಗೊಂಡರು. ಮಹಿಳಾ ಡಬಲ್ಸ್‌ನಲ್ಲಿ ಜಾಲಿ-ಗಾಯತ್ರಿ ಗೋಪಿಚಂದ್, ಮಿಶ್ರ ಡಬಲ್ಸ್‌ನಲ್ಲಿ ಸತೀಶ್ ಕರುಣಾಕರಣ್-ಆದ್ಯ ವಾರಿಯತ್, ಧ್ರುವ್ ಕಪಿಲಾ-ತನಿಶಾ ಕ್ರಾಸ್ಟೋ ಜೋಡಿ ಸೋತು ಹೊರಬೀಳುವ ಮೂಲಕ ನಿರಾಸೆ ಅನುಭವಿಸಿದೆ.

ನೀರಜ್ 2024ರ ಶ್ರೇಷ್ಠ ಜಾವೆಲಿನ್ ಎಸೆತಗಾರ: ಅಮೆರಿಕ ಮ್ಯಾಗಜಿನ್

ನವದೆಹಲಿ: 2 ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ 2024ರ ವಿಶ್ವದ ಶ್ರೇಷ್ಠ ಪುರುಷ ಜಾವೆಲಿನ್ ಎಸೆತಗಾರ ಎಂದು ಅಮೆರಿಕದ ಪ್ರತಿಷ್ಠಿತ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ ನ್ಯೂಸ್' ಮ್ಯಾಗಜಿನ್ ಬಣ್ಣಿಸಿದೆ. 27 ವರ್ಷದ ನೀರಜ್ ಕಳೆದ ವರ್ಷ ಆಗಸ್ಟ್‌ ನಲ್ಲಿ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 

1948ರಲ್ಲಿ ಆರಂಭಗೊಂಡಿದ್ದ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ ನ್ಯೂಸ್ ಮ್ಯಾಗಜಿನ್ ಕ್ರೀಡೆಯ ಬೈಬಲ್ ಎಂದೇ ಖ್ಯಾತಿ. ಈ ಮ್ಯಾಗಜಿನ್ ಪ್ರತಿ ವರ್ಷ ವಿಶ್ವದ ಕ್ರೀಡಾಪಟುಗಳಿಗೆ ಅವರ ಪ್ರದರ್ಶನದ ಆಧಾರದಲ್ಲಿ ರ್‍ಯಾಂಕಿಂಗ್‌ ನೀಡುತ್ತದೆ.

ಚೊಚ್ಚಲ ಖೋ ಖೋ ವಿಶ್ವಕಪ್‌ಗೆ ರಾಜ್ಯದ ಗೌತಮ್‌, ಚೈತ್ರಾ ಸಜ್ಜು

ಈ ವರ್ಷ ಭಾರತದಲ್ಲಿ ಅಂ.ರಾ. ಜಾವೆಲಿನ್‌ ಥ್ರೋ

ನವದೆಹಲಿ: ಭಾರತದಲ್ಲಿ ಜಾವೆಲಿನ್‌ ಥ್ರೋ ಬಗ್ಗೆ ಆಸಕ್ತಿ ಹೆಚ್ಚುತ್ತಿರುವ ಸಮಯದಲ್ಲೇ, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಜಾವೆಲಿನ್‌ ಥ್ರೋ ಕೂಟವನ್ನು ಆಯೋಜಿಸಲು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌ (ಎಎಫ್‌ಐ), ದೇಶದ ಅಗ್ರ ಖಾಸಗಿ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ ಜೆಎಸ್‌ಡಬ್ಲ್ಯು ಜೊತೆ ಕೈಜೋಡಿಸಿದೆ. ಸೆಪ್ಟೆಂಬರ್‌ನಲ್ಲಿ ಈ ಕೂಟ ನಡೆಯುವ ಸಾಧ್ಯತೆ ಇದ್ದು, ಭಾರತೀಯ ತಾರೆ ನೀರಜ್‌ ಚೋಪ್ರಾ ಸೇರಿ ವಿಶ್ವದ ಅಗ್ರ-10 ಜಾವೆಲಿನ್‌ ಎಸೆತಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಎಎಫ್‌ಐನ ಮಾಜಿ ಅಧ್ಯಕ್ಷ ಅದಿಲೆ ಸುಮರಿವಾಲಾ ತಿಳಿಸಿದ್ದಾರೆ.

click me!