ಸಾತ್ವಿಕ್‌-ಚಿರಾಗ್ ಕೈತಪ್ಪಿದ ಮಲೇಷ್ಯಾ ಓಪನ್‌ ಕಿರೀಟ

By Kannadaprabha News  |  First Published Jan 15, 2024, 10:04 AM IST

ಭಾನುವಾರ ನಡೆದ ಅತಿ ರೋಚಕ ಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ ವಿಶ್ವ ನಂ.1, ಚೀನಾದ ಲಿಯಾಂಗ್‌ ವೆಯ್ ಕೆಂಗ್‌-ವ್ಯಾಂಗ್‌ ಚಾಂಗ್‌ ವಿರುದ್ಧ 21-9, 18-21, 17-21ರಲ್ಲಿ ಸೋಲನುಭವಿಸಿತು. ಮೊದಲ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಸಾತ್ವಿಕ್‌-ಚಿರಾಗ್‌, ಪ್ರಬಲ ಸ್ಮ್ಯಾಶ್‌ಗಳ ಮೂಲಕ ಸುಲಭವಾಗಿ ಜಯಗಳಿಸಿತು.


ಕೌಲಾಲಂಪುರ(ಜ.15): ಭಾರತದ ತಾರಾ ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದರೊಂದಿಗೆ ಈ ವರ್ಷವನ್ನು ಪ್ರಶಸ್ತಿಯೊಂದಿಗೆ ವಿಶ್ವ ನಂ.2 ಜೋಡಿಯ ಕನಸಿಗೆ ಹಿನ್ನಡೆಯಾಗಿದೆ.

ಭಾನುವಾರ ನಡೆದ ಅತಿ ರೋಚಕ ಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ ವಿಶ್ವ ನಂ.1, ಚೀನಾದ ಲಿಯಾಂಗ್‌ ವೆಯ್ ಕೆಂಗ್‌-ವ್ಯಾಂಗ್‌ ಚಾಂಗ್‌ ವಿರುದ್ಧ 21-9, 18-21, 17-21ರಲ್ಲಿ ಸೋಲನುಭವಿಸಿತು. ಮೊದಲ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಸಾತ್ವಿಕ್‌-ಚಿರಾಗ್‌, ಪ್ರಬಲ ಸ್ಮ್ಯಾಶ್‌ಗಳ ಮೂಲಕ ಸುಲಭವಾಗಿ ಜಯಗಳಿಸಿತು. ಆದರೆ ಬಳಿಕ 2 ಗೇಮ್‌ಗಳಲ್ಲಿ ಚೀನಾ ಜೋಡಿ ತೀವ್ರ ಪೈಪೋಟಿ ನೀಡಿ, ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇದು ಚೀನಾ ಜೋಡಿ ವಿರುದ್ಧ ಸಾತ್ವಿಕ್‌-ಚಿರಾಗ್‌ಗೆ 4ನೇ ಸೋಲು. ಕೇವಲ 1 ಬಾರಿ ಮಾತ್ರ ಭಾರತೀಯರು ಗೆದ್ದಿದ್ದಾರೆ.

Tap to resize

Latest Videos

undefined

ಆಸ್ಟ್ರೇಲಿಯನ್ ಓಪನ್: ನೋವಾಕ್ ಜೋಕೋವಿಚ್ ಶುಭಾರಂಭ

ಮೆಲ್ಬರ್ನ್: 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ ಈ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಟೂರ್ನಿಯ 10 ಬಾರಿ ಚಾಂಪಿಯನ್ ಸರ್ಬಿಯಾದ ಜೋಕೋ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ, ಕ್ರೊವೇಷಿಯಾದ 18ರ ಡಿನೊ ಪ್ರಿಜ್ಮಿಕ್ ವಿರುದ್ದ 6-2, 6-7(5), 6-3, 6-4 ಅಂತರದಲ್ಲಿ ಜಯಭೇರಿ ಬಾರಿಸಿದರು. 2005ರಲ್ಲಿ ಜೋಕೋ ಗ್ರ್ಯಾನ್‌ಸ್ಲಾಂ ಪಾದಾರ್ಪಣೆ ಮಾಡಿದ 7 ತಿಂಗಳ ಬಳಿಕ ಹುಟ್ಟಿದ್ದ ಪ್ರಜ್ಮಿಕ್‌, ಜೋಕೋಗೆ ಪ್ರಬಲ ಪೈಪೋಟಿ ನೀಡಿ ಗಮನ ಸೆಳೆದರು. ರಷ್ಯಾದ ಆಂಡ್ರೆ ರುಬ್ಲೆವ್, ಇಟಲಿಯ ಜಾನಿಕ್ ಸಿನ್ನರ್ ಕೂಡಾ ಎರಡನೇ ಸುತ್ತಿಗೇರಿದರು.

Ranji Trophy ಗುಜರಾತ್‌ ಮೇಲೆ ಕರ್ನಾಟಕ ಅಧಿಪತ್ಯ

ಸಬಲೆಂಕಾಗೆ ಜಯ: ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ, ಡೆನ್ಮಾರ್ಕ್‌ನ ವೋಜ್ನಿಯಾಕಿ, ಗ್ರೀಕ್‌ನ ಮರಿಯಾ ಸಕ್ಕಾರಿ ಶುಭಾರಂಭ ಮಾಡಿದರು.

ಬಾಸ್ಕೆಟ್‌ಬಾಲ್‌: ಜೈನ್‌ ವಿವಿಗೆ ಪ್ರಶಸ್ತಿ

ಜೈಪುರ: ಇಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯ ಪುರುಷರ ತಂಡ ಚಾಂಪಿಯನ್‌ ಆಗಿದೆ. ಫೈನಲ್‌ ಪಂದ್ಯದಲ್ಲಿ ರಾಜಸ್ತಾನ್‌ ವಿಶ್ವವಿದ್ಯಾಲಯ ತಂಡವನ್ನು 71-48 ಅಂಕಗಳ ಅಂತರದಿಂದ ಸೋಲಿಸಿ ಜೈನ್‌ ವಿವಿ ಪ್ರಶಸ್ತಿ ಪಡೆಯಿತು. ಜೈನ್‌ ವಿವಿ ತಂಡದ ಪರ ಧೀರಜ್‌ ರೆಡ್ಡಿ 24, ಆ್ಯರೋನ್‌ ಬ್ಲೆಸ್ಸನ್‌ 16 ಅಂಕ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅತ್ತ ರಾಜಸ್ತಾನ ವಿವಿ ಪರ ಮಹಾವೀರ್‌ ಸಿಂಗ್‌ 22, ಹರ್ಮೀತ್‌ 10 ಅಂಕ ಗಳಿಸಿ ಮಿಂಚಿದರು.
 

click me!