ಆಫ್ರಿಕಾ ವೇಗಿ ಸೊತ್ಸೋಬೆಗೆ 8 ವರ್ಷ ನಿಷೇಧ...!

By Suvarna Web DeskFirst Published Jul 11, 2017, 10:25 PM IST
Highlights

33 ವರ್ಷದ ಸೊತ್ಸೋಬೆ ಒಟ್ಟು 5 ಟೆಸ್ಟ್, 63 ಏಕದಿನ ಮತ್ತು 23 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. 2012ರಲ್ಲಿ ಸೊತ್ಸೋಬೆ ಏಕದಿನ ಕ್ರಿಕೆಟ್'ನಲ್ಲಿ ನಂ.1 ಶ್ರೇಯಾಂಕಕ್ಕೆರಿದ್ದರು.

ಕೇಪ್‌'ಟೌನ್(ಜು.11): ಮ್ಯಾಚ್'ಫಿಕ್ಸಿಂಗ್ ಆರೋಪ ಸಾಬೀತಾದ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವೇಗಿ ಲೊನ್ವಾಬೊ ಸೊತ್ಸೋಬೆಯನ್ನು 8 ವರ್ಷಗಳ ಕಾಲ ಕ್ರಿಕೆಟ್'ನಿಂದ ನಿಷೇಧ ಹೇರಿದೆ.

ಒಂದು ಕಾಲದ ಏಕದಿನ ಕ್ರಿಕೆಟ್'ನ ನಂ.1 ಬೌಲರ್ ಸೊತ್ಸೋಬೆಯನ್ನು ದಕ್ಷಿಣ ಆಫ್ರಿಕಾ ಮಂಡಳಿ 8 ವರ್ಷಗಳ ಕಾಲ ಕ್ರಿಕೆಟ್'ನಿಂದ ದೂರವಿಟ್ಟಿದೆ.

Latest Videos

2015ರ ರ್ಯಾಮ್'ಸ್ಲಾಂ ಟಿ20 ಪಂದ್ಯಾವಳಿ ವೇಳೆ ಮ್ಯಾಚ್ ಫಿಕ್ಸಿಂಗ್ ನಡೆಸಲು ಯತ್ನಿಸಿದ್ದಾಗಿ ಗುಲಾಮ್ ಬೋಧಿ ತಪ್ಪೊಪ್ಪಿಕೊಂಡ ಬಳಿಕ ಅವರನ್ನು 20 ವರ್ಷಗಳ ಕಾಲ ನಿಷೇಧಗೊಳಿಸಲಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ತನಿಖೆ ಚುರುಕುಗೊಳಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಸೊಸೊಬೆ ಕೂಡ ಮ್ಯಾಚ್ ಫಿಕ್ಸಿಂಗ್ ನಡೆಸಲು ಯತ್ನಿಸಿದ್ದರು ಎನ್ನುವುದನ್ನು ಪತ್ತೆಹಚ್ಚಿದೆ.

ನಿಷೇಧ ತೀರ್ಪು ಹೊರಬೀಳುತ್ತಿದ್ದಂತೆ ಸೊತ್ಸೋಬೆ ವಿಶ್ವದಾದ್ಯಂತಯಿರುವ ಕ್ರಿಕೆಟ್ ಅಭಿಮಾನಿಗಳ ಕ್ಷಮೆಯಾಚಿಸಿದ್ದು, ಆ ವೇಳೆ ನಾನು ತುಂಬಾ ಆರ್ಥಿಕ ಸಂಕಷ್ಟದಲ್ಲಿದ್ದೆ, ಹಾಗಂತ ನಾನು ಪಾಲ್ಗೊಂಡಿದ್ದು ಸರಿಯೆಂದು ಹೇಳುತ್ತಿಲ್ಲ. ನನ್ನ ಪರಿಸ್ಥಿತಿಯನ್ನು, ನನ್ನ ಕ್ಷಮೆಯನ್ನು ಕ್ರಿಕೆಟ್ ಜಗತ್ತು ಅರ್ಥ ಮಾಡಿಕೊಳ್ಳಲಿದೆ ಎಂದು ಭಾವಿಸುತ್ತೇನೆ ಎಂದು ಸೊತ್ಸೋಬೆ ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೇ ಅಲ್ವಿರೋ ಪೀಟರ್'ಸನ್, ಥಾಮಿ ಸೊಲೇಕಿಲೆ, ಜೀನ್ ಸೈಮ್ಸ್, ಫುಮೆಲೆಲಾ ಮ್ಯಾಟ್ಸ್'ಸಿಕ್ವೆ ಮತ್ತು ಎಥಿ ಎಂಬಾಲ್ಟಿ ಅವರಿಗೆ 20 ವರ್ಷ ನಿಷೇಧ ಹೇರಲಾಗಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಸೊತ್ಸೋಬೆಗೆ ಏಪ್ರಿಲ್  24, 2017ರಿಂದ ಕ್ರಿಕೆಟ್'ನಿಂದ ದೂರ ಉಳಿಯಲು ಸೂಚಿಸಿತ್ತು. ಹಾಗಾಗಿ ಅಂದಿನಿಂದಲೇ ನಿಷೇಧ ಶಿಕ್ಷೆ ಜಾರಿಯಾಗಲಿದೆ.

33 ವರ್ಷದ ಸೊತ್ಸೋಬೆ ಒಟ್ಟು 5 ಟೆಸ್ಟ್, 63 ಏಕದಿನ ಮತ್ತು 23 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. 2012ರಲ್ಲಿ ಸೊತ್ಸೋಬೆ ಏಕದಿನ ಕ್ರಿಕೆಟ್'ನಲ್ಲಿ ನಂ.1 ಶ್ರೇಯಾಂಕಕ್ಕೆರಿದ್ದರು.

click me!