ಮಣಿಪುರದಲ್ಲಿ ಕ್ರೀಡಾ ವಿವಿ ಸ್ಥಾಪನೆಗೆ ಸಂಸತ್ ಒಪ್ಪಿಗೆ

By Web DeskFirst Published Aug 4, 2018, 1:46 PM IST
Highlights

ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಮೇ 31ರಂದು ಧ್ವನಿಮತದ ಮೂಲಕ ಲೋಕಸಭೆಯಲ್ಲಿ ಪ್ರಸ್ತಾವನೆ ಹೊರಡಿಸಲಾಗಿತ್ತು. ಈ ಸಂಬಂಧ ಕ್ರೀಡಾ ಸಚಿವ ರಾಜ್ಯವರ್ಧನ್, ₹524 ಕೋಟಿ ವೆಚ್ಚದಲ್ಲಿ ಕ್ರೀಡಾ ತರಬೇತಿ ಮತ್ತು ಸಂಶೋಧನೆಗಾಗಿ ಮಣಿಪುರದಲ್ಲಿ ರಾಷ್ಟ್ರೀಯ ಕ್ರೀಡಾ ವಿವಿ ಸ್ಥಾಪಿಸಲಾಗುವುದು. ಜತೆಗೆ ಕ್ರೀಡಾ ವಿವಿ ಉಪಕುಲಪತಿ ಹಾಗೂ ಇತರ ಸ್ಥಾನಗಳಿಗೆ ಕ್ರೀಡಾಪಟುಗಳೆ ನೇಮಕಗೊಳ್ಳಲಿದ್ದಾರೆ’ ಎಂದಿದ್ದಾರೆ. 

ನವದೆಹಲಿ[ಆ.04]: ‘ದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸುವುದಕ್ಕೋಸ್ಕರ ಮಣಿಪುರದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆಗಾಗಿ ಮಂಡಿಸಿದ್ದ ಮಸೂದೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರವಾಗಿದೆ.

ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಮೇ 31ರಂದು ಧ್ವನಿಮತದ ಮೂಲಕ ಲೋಕಸಭೆಯಲ್ಲಿ ಪ್ರಸ್ತಾವನೆ ಹೊರಡಿಸಲಾಗಿತ್ತು. ಈ ಸಂಬಂಧ ಕ್ರೀಡಾ ಸಚಿವ ರಾಜ್ಯವರ್ಧನ್, ₹524 ಕೋಟಿ ವೆಚ್ಚದಲ್ಲಿ ಕ್ರೀಡಾ ತರಬೇತಿ ಮತ್ತು ಸಂಶೋಧನೆಗಾಗಿ ಮಣಿಪುರದಲ್ಲಿ ರಾಷ್ಟ್ರೀಯ ಕ್ರೀಡಾ ವಿವಿ ಸ್ಥಾಪಿಸಲಾಗುವುದು. ಜತೆಗೆ ಕ್ರೀಡಾ ವಿವಿ ಉಪಕುಲಪತಿ ಹಾಗೂ ಇತರ ಸ್ಥಾನಗಳಿಗೆ ಕ್ರೀಡಾಪಟುಗಳೆ ನೇಮಕಗೊಳ್ಳಲಿದ್ದಾರೆ’ ಎಂದಿದ್ದಾರೆ. 

ಕ್ರೀಡಾ ವಿಶ್ವವಿದ್ಯಾಲಯವು ಕ್ರೀಡಾ ಶಿಕ್ಷಣಕ್ಕೆ ಉತ್ತೇಜನ ನೀಡುವುದರ ಜತೆಗೆ ಕ್ರೀಡಾ ವಿಜ್ಞಾನ, ಕ್ರೀಡಾ ತಂತ್ರಜ್ಞಾನ, ಕ್ರೀಡಾ ಕೋಚಿಂಗ್ ಬಗ್ಗೆಯೂ ಇದು ಗಮನ ಹರಿಸಲಿದೆ. 

click me!