ಮೆಸ್ಸಿಗೆ ಬಲಾನ್ ಡಿ ಆರ್ ಪ್ರಶಸ್ತಿ ಸಾಧ್ಯತೆ

Published : Nov 03, 2016, 02:29 PM ISTUpdated : Apr 11, 2018, 12:48 PM IST
ಮೆಸ್ಸಿಗೆ ಬಲಾನ್ ಡಿ ಆರ್ ಪ್ರಶಸ್ತಿ ಸಾಧ್ಯತೆ

ಸಾರಾಂಶ

ಆಯ್ದ ಪತ್ರಕರ್ತರು ವೋಟ್ ಮಾಡುವ ಮೂಲಕ ಬಲಾನ್ ಡಿ ಆರ್ ಪ್ರಶಸ್ತಿಯನ್ನು ಯಾವ ಆಟಗಾರನಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಮೆಸ್ಸಿ ಫೀಫಾದ ವರ್ಷದ ಉತ್ತಮ ಆಟಗಾರ ಪ್ರಶಸ್ತಿ ಪಡೆಯುವ ಸಾಧ್ಯತೆಯಿದೆ.

ಲಂಡನ್(ನ.03): ವಿಶ್ವ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಅರ್ಜೆಂಟೀನಾದ ಫುಟ್ಬಾಲಿಗ ಲಯೋನೆಲ್ ಮೆಸ್ಸಿ ಹಿಂದಿಕ್ಕಲಿದ್ದು, ಫೀಫಾದ ಪ್ರತಿಷ್ಠಿತ ಪ್ರಶಸ್ತಿಯಾದ ಬಲಾನ್ ಡಿ ಆರ್ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆಯಿದೆ ಕ್ಯಾಟ್ಲನ್ ಡೈಲಿ ಡೈರಿಯೊ ಗೊಲ್ ಹೆಸರಿನ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಆಯ್ದ ಪತ್ರಕರ್ತರು ವೋಟ್ ಮಾಡುವ ಮೂಲಕ ಬಲಾನ್ ಡಿ ಆರ್ ಪ್ರಶಸ್ತಿಯನ್ನು ಯಾವ ಆಟಗಾರನಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಮೆಸ್ಸಿ ಫೀಫಾದ ವರ್ಷದ ಉತ್ತಮ ಆಟಗಾರ ಪ್ರಶಸ್ತಿ ಪಡೆಯುವ ಸಾಧ್ಯತೆಯಿದೆ.

ಅದರಂತೆ ರೊನಾಲ್ಡೊ ಕೂಡ ಈ ರೇಸ್‌ನಲ್ಲಿದ್ದಾರೆ. ಪ್ರಸಕ್ತ ವರ್ಷ ನಡೆದ ಚಾಂಪಿಯನ್ಸ್ ಲೀಗ್ ಮತ್ತು ಯುರೋ 2016ರ ಫುಟ್ಬಾಲ್ ಟೂರ್ನಿಯಲ್ಲಿ ರೊನಾಲ್ಡೊ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಈ ವರ್ಷದ ಆರಂಭದಲ್ಲಿ ರೊನಾಲ್ಡೊ, ಅತಿ ಹೆಚ್ಚು ಗೋಲುಗಳಿಸಿದ ಸಾಧನೆಯೊಂದಿಗೆ ಪ್ರತಿಷ್ಟಿತ ಎರಡು ಪ್ರಶಸ್ತಿ ಪಡೆದಿದ್ದರು. ಯುರೋ ಫುಟ್ಬಾಲ್ ನಂತರ ರೊನಾಲ್ಡೊ ಮಂಕಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಕಲ್‌ನಲ್ಲಿ ಬಂದ ಅಭಿಮಾನಿ, ಜಗನ್ನಾಥನ ಚಿತ್ರ… ರಜತ್ ಪಾಟಿದಾರ್ ಮಾಡಿದ ಆ ಒಂದು ಕೆಲಸಕ್ಕೆ ಭಾರೀ ಮೆಚ್ಚುಗೆ!
IND vs WI 2nd ODI; ಮೊದಲ ಪಂದ್ಯದ ಸೋಲಿನಿಂದ ಎಚ್ಚೆತ್ತ ಟೀಮ್ ಇಂಡಿಯಾ, ಇಬ್ಬರು ಆಟಗಾರರಿಗೆ ಗೇಟ್‌ಪಾಸ್?