
ವಾರಾಣಾಸಿ(ನ.03): ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಬಾಸ್ಕೆಟ್‌ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಅವರ ವಿವಾಹವು ಮುಂದಿನ ತಿಂಗಳು ಡಿಸೆಂಬರ್ 9ಕ್ಕೆ ಜರುಗಲಿದೆ.
ಇದೇ ವರ್ಷ ಜೂನ್ 19ರಂದು ಇಬ್ಬರ ವಿವಾಹ ನಿಶ್ಚಯವಾಗಿತ್ತು. ವಾರಾಣಸಿ ಮೂಲದ, ಭಾರತ ಬಾಸ್ಕೆಟ್‌ಬಾಲ್ ಮಹಿಳಾ ತಂಡದ ನಾಯಕಿಯೂ ಆದ ಪ್ರತಿಮಾ ಸಿಂಗ್ ಏಷ್ಯಾ ಕ್ರೀಡಾಕೂಟವಲ್ಲದೆ ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಸುತ್ತಾ ಬರುತ್ತಿದ್ದಾರೆ.
‘ಸಿಂಗ್ ಸಿಸ್ಟರ್ಸ್’ ಎಂದೇ ಕರೆಯಲ್ಪಡುವ ಐವರು ಸೋದರಿಯರ ಪೈಕಿ, ಪ್ರತಿಮಾ ಕೊನೆಯವರು.
ಅಂದಹಾಗೆ ಈ ಐವರು ಆಟಗಾರ್ತಿಯರೂ ಬಾಸ್ಕೆಟ್‌ಬಾಲ್ ಪಟುಗಳೆಂಬುದು ಗಮನಾರ್ಹ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.