
ಸದ್ಯ ಭಾರತದ ಹಾಟ್ ಸೆನ್ಸೇಷನ್ ಕುಲ್ದೀಪ್ ಯಾದವ್ ಇತ್ತೀಚೆಗೆ ಮಾಡಿರೋ ಮೋಡಿ ಅಷ್ಟಿಷ್ಟಲ್ಲ. ಆಡಿರುವ ಕೇವಲ ಬೆರಳೆಣಿಕೆಯಷ್ಟು ಪಂದ್ಯಗಳಲ್ಲೇ ಇಡೀ ಭಾರತದ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿಬಿಟ್ಟಿದ್ದಾರೆ. ಆದ್ರೆ ಇಡೀ ಭಾರತವೇ ಕುಲ್ದೀಪ್ನ ಹಿಂದೆ ಬಿದ್ದಿದ್ರೆ ಆಸೀಸ್ ಆಟಗಾರರು ಮಾತ್ರ ಇವರನ್ನ ಕಂಡ್ರೆ ಮಾರುದ್ದ ಓಡ್ತಿದ್ದಾರೆ. ಕನಸ್ಸಲ್ಲೂ ಕುಲ್ದೀಪ್ನ ನೆನೆದು ಗಢಗಢ ಅಂತ ನಡಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕುಲ್ದೀಪ್ ಯಾದವ್ ಆಸೀಸ್ಗಳನ್ನ ಕಳೆದ 2 ವಾರ ಕಾಡಿಬಿಟ್ಟಿದ್ದಾರೆ.
ಚೈನಾಮ್ಯಾನ್ ಹಿಂದಿರೋ ಆ ಮಾಂತ್ರಿಕ ಶಕ್ತಿ ಯಾವುದು..?
ಕೇವಲ 4 ಏಕದಿನ ಮತ್ತು ಒಂದು ಟಿ20 ಪಂದ್ಯದಲ್ಲಿ ಬರೊಬ್ಬರಿ 9 ವಿಕೆಟ್ ಪಡೆದು ಆಸೀಸ್ ವಿರುದ್ಧ ಅತೀ ಯಶಸ್ಸು ಪಡೆದ ಬೌಲರ್ ಎನ್ನಿಸಿಕೊಂಡಿರೋ ಕುಲ್ದೀಪ್ ಯಶಸ್ಸಿಗೆ ಕಾರಣ ಯಾರು ಗೊತ್ತಾ..? ಕೇವಲ ಬೆರಳುಗಳಿಂದೇ ಆಸೀಸ್ ಬ್ಯಾಟ್ಸ್ಮನ್ಗಳಿಗೆ ಸಿಂಹಸ್ವಪ್ನವಾಗಲು ಕಾರಣ ಯಾರು ಗೊತ್ತಾ..? ಅದೇ ಕಾಂಗರೂ ನಾಡಿನ ಮಾಜಿ ಆಟಗಾರರು.
ವಾರ್ನ್-ಹಾಗ್ರಿಂದ ಕುಲ್'ದೀಪ್ಗೆ ಟಿಪ್ಸ್
ಇಂದು ಕುಲ್ದೀಪ್ ಆಸೀಸ್ಗಳನ್ನ ಈ ಪರಿ ಕಾಡಲು ಕಾರಣ ಅದೇ ಅಸ್ಟ್ರೇಲಿಯಾದ ಒಂದು ಕಾಲದ ಸ್ಪಿನ್ ದಂತಕತೆ ಶೇನ್ ವಾರ್ನ್ ಮತ್ತು ಆಸೀಸ್ನ ಯಶಸ್ವಿ ಚೈನಾಮ್ಯಾನ್ ಬ್ರಾಡ್ ಹಾಗ್. ಇವರಿಬ್ಬರಿಂದ ಸಿಕ್ಕ ಬ್ರಹ್ಮಾಸ್ತ್ರಗಳು ಇಂದು ಕಾಂಗರೂಗಳ ಮೇಲೆಯೇ ಪ್ರಯೋಗವಾಗುತ್ತಿವೆ.
ಕುಲ್ದೀಪ್ ಹೇಳಿದಂತೆ ತನ್ನ ಬಾಲ್ಯದ ಹೀರೋ ಶೇನ್ ವಾರ್ನ್ರಿಂದ ಕಲಿತಿದ್ದು ಮತ್ತು KKRನ ಟೀಂ ಮೇಟ್ ಬ್ರಾಡ್ ಹಾಗ್ರಿಂದ ಕಲಿತಿದ್ದನ್ನ ತಮ್ಮ ಬೌಲಿಂಗ್ನಲ್ಲಿ ಅಳವಡಿಸಿಕೊಂಡು ಇಂದು ಯಶಸ್ವಿ ಬೌಲರ್ ಎನ್ನಿಸಿಕೊಂಡಿದ್ದಾರೆ. ಕುಲ್ದೀಪ್ ಪ್ರಕಾರ ಆತ ಶೇನ್ ವಾರ್ನ್ ಸಾಧಿಸಿರುವುದರಲ್ಲಿ ಅರ್ಧ ಸಾಧಿಸಿದ್ರೆ ಆತ ಯಶಸ್ಸು ಪಡೆದಂತೆಯೇ.
ಒಟ್ಟಿನಲ್ಲಿ ಸದ್ಯ ಕುಲ್ದೀಪ್ ಬಗ್ಗೆ ಇಡೀ ದೇಶವೇ ಮಾತನ್ನಾಡುತ್ತಿದ್ರೆ ಆತ ಮಾತ್ರ ಆಸೀಸ್ ಮೇಲಿನ ಯಶಸ್ಸಿಗೆ ಆಸೀಸ್ ಮಾಜಿ ಆಟಗಾರರೇ ಕಾರಣ ಎನ್ನುತ್ತಿದ್ದಾನೆ. ಯಾರೇ ಕಾರಣವಾದ್ರೂ ಟೀಂ ಇಂಡಿಯಾಗೊಬ್ಬ ಅದ್ಭುತ ಸ್ಪಿನ್ನರ್ ಸಿಕ್ಕ ಖುಷಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.