ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು ಮಾರ್ಚ್ 28ರಿಂದ ಮೇ 04ರವರೆಗೆ ಲೀಗ್ ಹಂತದಲ್ಲಿ ಒಟ್ಟು 7 ಪಂದ್ಯಗಳು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದ್ದು, ಭಾರತೀಯ ಯೋಧರನ್ನು ಪಂದ್ಯ ವೀಕ್ಷಿಸಲು ಕೆಎಸ್’ಸಿಎ ಆಹ್ವಾನಿಸಿದೆ.
ಬೆಂಗಳೂರು(ಮಾ.28): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ತನ್ನ ಪ್ರಾಯೋಜಕರಾದ ಭಾರತಿ ಸಿಮೆಂಟ್ಸ್ ಸಹಯೋಗದೊಂದಿಗೆ ತವರಿನಲ್ಲಿ ಆಡುವ ಪ್ರತಿ ಪಂದ್ಯಕ್ಕೆ ತಲಾ 60 ಯೋಧರನ್ನು ಆಹ್ವಾನಿಸಲು ನಿರ್ಧರಿಸಿದೆ.
IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಎಲ್ಲಾ 7 ಪಂದ್ಯಗಳಿಗೂ ಸೈನಿಕರಿಗೆ ಆಹ್ವಾನ ನೀಡಲಾಗುವುದು ಎಂದು ಕೆಎಸ್‌ಸಿಎ ಪ್ರಕಟಣೆ ತಿಳಿಸಿದೆ. ಮಾರ್ಚ್ 28ರಿಂದ ಮೇ 04ರವರೆಗೆ ಲೀಗ್ ಹಂತದಲ್ಲಿ ಒಟ್ಟು 7 ಪಂದ್ಯಗಳು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.
ಐಪಿಎಲ್: RCB ಬೆಂಗಳೂರು ಪಂದ್ಯಕ್ಕೆ ಮೆಟ್ರೋದಿಂದ ಶುಭಸುದ್ದಿ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು 20, ಕೆಎಸ್’ಸಿಎ 20 ಹಾಗೂ ಭಾರತಿ ಸಿಮೆಂಟ್ ತಲಾ 20 ಟಿಕೆಟ್’ಗಳನ್ನು ಯೋಧರಿಗೆ ನೀಡಲಿದೆ. ಈ ಮೊದಲು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸೂಚಕವಾಗಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿ ಬಿಸಿಸಿಐ 20 ಕೋಟಿ ರುಪಾಯಿಯನ್ನು ಸೇನಾ ಕಲ್ಯಾಣ ನಿಧಿಗೆ ಅರ್ಪಿಸಿತ್ತು. ಆ ಬಳಿಕ ಚೆನ್ನೈ ಸೂಪರ್’ಕಿಂಗ್ಸ್ ತಂಡವು ಉದ್ಘಾಟನಾ ಪಂದ್ಯದ ಸಂಭಾವನೆಯನ್ನು ಯೋಧರ ನಿಧಿಗೆ ನೀಡಿದ್ದರು.
ಮಾರ್ಚ್ 28ರಿಂದ ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಜಯದ ಖಾತೆ ತೆರೆಯುವ ಉತ್ಸಾದಲ್ಲಿದೆ.