ಕೊರಿಯಾ ಓಪನ್: ಪ್ರೀ ಕ್ವಾರ್ಟರ್'ಗೆ ಲಗ್ಗೆಯಿಟ್ಟ ಸಿಂಧು, ಕಶ್ಯಪ್

Published : Sep 13, 2017, 05:45 PM ISTUpdated : Apr 11, 2018, 12:54 PM IST
ಕೊರಿಯಾ ಓಪನ್: ಪ್ರೀ ಕ್ವಾರ್ಟರ್'ಗೆ ಲಗ್ಗೆಯಿಟ್ಟ ಸಿಂಧು, ಕಶ್ಯಪ್

ಸಾರಾಂಶ

ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ಬೆಳ್ಳಿ ಗೆದ್ದ ಸಿಂಧು, ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌'ನ ಯಿ ಚುಯುಂಗ್ ವಿರುದ್ಧ 21-13, 21-08 ಗೇಮ್‌'ಗಳ ಸುಲಭ ಜಯ ಸಾಧಿಸಿದರು.

ಸೋಲ್(ಸೆ.13): ಭಾರತದ ಸ್ಟಾರ್ ಶಟ್ಲರ್‌'ಗಳಾದ ಪಿ.ವಿ.ಸಿಂಧು ಹಾಗೂ ಪರುಪಳ್ಳಿ ಕಶ್ಯಪ್ ಕೊರಿಯಾ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ಬೆಳ್ಳಿ ಗೆದ್ದ ಸಿಂಧು, ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌'ನ ಯಿ ಚುಯುಂಗ್ ವಿರುದ್ಧ 21-13, 21-08 ಗೇಮ್‌'ಗಳ ಸುಲಭ ಜಯ ಸಾಧಿಸಿದರು.

ಮಂಗಳವಾರ ನಡೆದಿದ್ದ ಪುರುಷರ ಸಿಂಗಲ್ಸ್‌ನ ಅರ್ಹತಾ ಸುತ್ತಿನಲ್ಲಿ ಸತತ 2 ಪಂದ್ಯ ಗೆದ್ದು ಪ್ರಧಾನ ಸುತ್ತಿಗೇರಿದ್ದ ಪಿ.ಕಶ್ಯಪ್, ಇಂದು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಹ್ಸು ಜೆನ್ ಹೋ ವಿರುದ್ಧ 21-13, 21-16 ನೇರ ಸೆಟ್'ಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

ಇನ್ನು ಮತ್ತೋರ್ವ ಶಟ್ಲರ್ ಬಿ. ಸಾಯಿ ಪ್ರಣೀತ್ ಕೂಡ ಮುಂದಿನ ಹಂತ ಪ್ರವೇಶಿಸಿದ್ದಾರೆ. ಹಾಂಗ್ ಕಾಂಗ್'ನ ಹು ಯುನ್ ವಿರುದ್ಧ 21-15, 21-10 ನೇರ ಸೆಟ್'ನಲ್ಲಿ ಮಣಿಸಿ ಜಯದ ನಗೆ ಬೀರಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋ ಟು ಹೆಲ್, ಗೆಳತಿಯೊಂದಿಗೆ ಡಿನ್ನರ್ ಡೇಟ್ ವೇಳೆ ಫ್ಯಾನ್ಸ್ ಬೈಗುಳ, ಹಾರ್ದಿಕ್ ಪಾಂಡ್ಯ ಮಾಡಿದ್ದೇನು?
ತಿರುಪತಿಗೆ ತಿರುಮಲನಿಗೆ ಮುಡಿ ಕೊಟ್ಟ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್