
ಅಭ್ಯಾಸ ಪಂದ್ಯದಲ್ಲಿ ಪ್ರೆಸಿಡೆಂಟ್ ಇಲೆವನ್ ವಿರುದ್ಧ ಆಸ್ಟ್ರೇಲಿಯಾ 103 ರನ್ಗಳ ಭರ್ಜರಿ ಜಯ ಸಾಧಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಯುವ ಬೌಲರ್ಗಳನ್ನ ಇನ್ನಿಲ್ಲದಂತೆ ದಂಡಿಸಿದ ಸ್ಮಿತ್ ಪಡೆ 347 ರನ್ಗಳ ಬೃಹತ್ ಮತ್ತ ಪೇರಿಸಿತು. ನಂತರ ಬೌಲರ್'ಗಳ ಮ್ಯಾಜಿಕ್ ಸ್ಪೆಲ್'ನಿಂದ ಪ್ರೆಸಿಡೆಂಟ್ ಇಲೆವನ್ ಅನ್ನ 244 ರನ್ಗಳಿಗೆ ಆಲೌಟ್ ಮಾಡಿ ಜಯ ಸಾಧಿಸ್ತು.
ಎರಡೂ ಕೈಯಿಂದ ಬೌಲಿಂಗ್ ಮಾಡ್ತಾನೆ ವಿದರ್ಭ ಸ್ಪಿನ್ನರ್
ನಿನ್ನೆ ಪ್ರೆಸಿಡೆಂಟ್ ಇಲೆವನ್ ತಂಡದ ಯುವ ಸ್ಪಿನ್ನರ್ ಅಕ್ಷಯ್ ಕಾರ್ನೆವಾರ್ ಆಸೀಸ್ ಬ್ಯಾಟ್ಸ್ಮನ್ಗಳನ್ನ ಕನ್ಫ್ಯೂಸ್ ಮಾಡಿಬಿಟ್ಟ. ತನ್ನ ವಿಚಿತ್ರ ಬೌಲಿಂಗ್ನಿಂದ ಇಡೀ ವಿಶ್ವದ ಗಮನ ಸೆಳೆದುಬಿಟ್ಟ. ಲೆಷ್ಟ್ ಆರ್ಮ್ ಮತ್ತು ರೈಟ್ ಆರ್ಮ್ ಎರಡೂ ಕೈಗಳಿಂದ ಬೌಲಿಂಗ್ ಮಾಡುವ ಮೂಲಕ ಕ್ರಿಕೆಟ್ ಲೋಕಕ್ಕೆ ಆಶ್ಚರ್ಯ ಪಡಿಸಿದ್ದ.
ವಿದರ್ಭ ತಂಡದ ಆಲ್ರೌಂಡರ್ ಅಕ್ಷಯ್ ಕಾರ್ನೆವಾರ್ ಎಡಗೈ ಬ್ಯಾಟ್ಸ್ಮನ್ಗೆ ಬೌಲ್ ಮಾಡುವಾಗ ಬಲಗೈನಲ್ಲಿ ಬೌಲ್ ಮಾಡಿದ್ರೆ, ಬಲಗೈ ಬ್ಯಾಟ್ಸ್ಮನ್'ಗೆ ಎಡಗೈನಲ್ಲಿ ಬೌಲ್ ಮಾಡ್ತಾನೆ. ಇದರ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಕನ್ಫ್ಯೂಸ್ ಮಾಡಿ ವಿಕೆಟ್ಗಳನ್ನ ಪಡಿತಾನೆ.
ಎರಡೂ ಕೈಯಲ್ಲಿ ಬೌಲ್ ಮಾಡುವುದು ಅಕ್ಷಯ್ ಒಬ್ಬನೇ ಅಲ್ಲ
ಸದ್ಯ ಅಕ್ಷಯ್ ಕಾರ್ನೆವಾರ್ ಎರಡೂ ಕೈಯಲ್ಲಿ ಬೌಲ್ ಮಾಡಿ ಇಡೀ ಜಗತ್ತನ್ನೇ ಚಕಿತಗೊಳಿಸಿದ್ದಾನೆ. ಆದ್ರೆ ಅಕ್ಷಯ್ನಂತೆ ಎರಡೂ ಕೈಯಲ್ಲಿ ಬೌಲ್ ಮಾಡೋ ಇಬ್ಬರು ಬೌಲರ್ಗಳು ನಮ್ಮ ನೆರೆ ರಾಷ್ಟ್ರವಾದ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿದ್ದಾರೆ.
ಲಂಕಾ ನಾಡಿದ ಎಡಗೈ ಕಮ್ ಬಲಗೈ ಬೌಲರ್ ಕಮಿಂಡು ಮೆಂಡಿಸ್
ಭಾರತದಲ್ಲಿ ಎರಡೂ ಕೈನಲ್ಲಿ ಬೌಲ್ ಮಾಡಿ ಕಮಾಲ್ ಮಾಡುತ್ತಿರುವಂತೆ ಶ್ರೀಲಂಕಾದಲ್ಲಿ ಕಮಿಂಡು ಮೆಂಡಿಸ್ ಎಲ್ಲರನ್ನ ಆಶ್ಚರ್ಯಚಕಿತಗೊಳಿಸಿದ್ದಾನೆ. ಈಗಾಗಲೇ ಲಂಕಾ ಪರ ಅಂಡರ್ 19 ಕ್ರಿಕೆಟ್ನಲ್ಲಿ ಕಮಾಲ್ ಮಾಡುತ್ತಿರುವ ಈತ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಕಾಡ್ತಿದ್ದಾನೆ.
ವಿಶ್ವದ ಮೊದಲ ಲೆಫ್ಟ್ ಕಮ್ ರೈಟ್ ಆರ್ಮ್ ಬೌಲರ್ ಯಾಸೀರ್ ಜಾನ್
ವಿಶ್ವದ ಮೊದಲ ಲೆಫ್ಟ್ ಕಮ್ ರೈಟ್ ಆರ್ಮ್ ಬೌಲರ್ ಕಂಡುಬಂದಿದ್ದೇ ಪಾಕಿಸ್ತಾನದಲ್ಲಿ. ಯಾಸೀರ್ ಜಾನ್ ಯಂಬ ಯುವ ಪ್ರತಿಭೆ ಎರಡೂ ಕೈನಲ್ಲಿ ಬೌಲ್ ಮಾಡಿ ಫುಲ್ ಫೇಮಸ್ ಆಗಿದ್ದ. ಬಲಗೈನಲ್ಲಿ ಎಷ್ಟು ವೇಗವಾಗಿ ಬೌಲ್ ಮಾಡ್ತಿದ್ದನೋ ಅಷ್ಟೇ ವೇಗವಾಗಿ ಎಡಗೈನಲ್ಲೂ ಬೌಲಿಂಗ್ ಮಾಡಿ ಗಮನ ಸೆಳೆದಿದ್ದ.
ಒಟ್ಟಿನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ವಿಚಿತ್ರ ಬೌಲರ್'ಗಳು ಹುಟ್ಟಿಕೊಂಡಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಡಲು ಆತೊರೆಯುತ್ತಿದ್ದಾರೆ. ಈಗಲೇ ಎಷ್ಟೋ ಮಿಸ್ಟರಿ ಬೌಲರ್ಗಳು ಲೆಜಂಡರಿ ಬ್ಯಾಟ್ಸ್ಮನ್ಗಳನ್ನ ಇನ್ನಿಲ್ಲದಂತೆ ಕಾಡ್ತಿದ್ದಾರೆ. ಇನ್ನೂ ಇವರುಗಳೂ ಬಂದು ಬಿಟ್ರೆ ಮುಗಿದೇ ಹೊಯ್ತು. ಬ್ಯಾಟ್ಸ್ಮನ್ಗಳ ಆಟ ಅನ್ನೋ ಅಪವಾದ ಹೊತ್ತಿದ್ದ ಕ್ರಿಕೆಟ್ ಮುಂದೊಂದು ದಿನ ಬೌಲರ್ಗಳ ಆಟವಾಗಿಬಿಡುತ್ತೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.