
ಸದ್ಯ ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್ ಯಾರು ಅಂದ್ರೆ ಥಟ್ ಅಂತ ವಿರಾಟ್ ಕೊಹ್ಲಿ ಅಂತ ಅಂದುಬಿಡ್ತೀರಾ. ಕ್ರೀಸ್ನಲ್ಲಿ ನಿಂತು ಎದುರಾಳಿ ಬೌಲರ್ಗಳಿಗೆ ಬೆವರಿಳಿಸಿ ರನ್ ಗುಡ್ಡೆ ಹಾಕೋ ಕೊಹ್ಲಿ ಸಕ್ಸಸ್ನ ಹಿಂದಿನ ರೋಚಕ ಸ್ಟೋರಿಯನ್ನ ನೀವು ಕೇಳಲೇಬೇಕು. ಅಷ್ಟೇ ಅಲ್ಲ ಅವರು ಬಳಸೋ ಬ್ಯಾಟಿನ ಎಕ್ಸ್ಕ್ಲೂಸಿವ್ ಮಾಹಿತಿಯೊಂದನ್ನ ನೀವು ತಿಳಿದುಕೊಳ್ಳಲೇಬೇಕು.
ಸೆಂಚುರಿ ಸ್ಟಾರ್ ಹಿಂದಿದೆ ರೋಚಕ ಸ್ಟೋರಿ..!
ವಿರಾಟ್ ಕೊಹ್ಲಿ, ಸದ್ಯ ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್, ಟೀಂ ಇಂಡಿಯಾದ ರನ್ ಮೆಷಿನ್. ಈತ ಮೈದಾನದೊಳಗೆ ಕಾಲಿಟ್ಟರೆ ಮುಗಿಯಿತು ಕೆಲಸ ಮುಗಿಸಿಯೇ ಪೆವಿಲಿಯನ್ ಸೇರುವುದು. ಈತನ ಬ್ಯಾಟಿಂಗ್ ನೋಡ್ತಿದ್ರೆ ಬ್ಯಾಟಿಂಗ್ ಎನ್ನುವುದು ಇಷ್ಟು ಸುಲಭಾನಾ ಅಂತ ಅನ್ನಿಸದೇ ಇರದು. ಆ ಮಟ್ಟಕ್ಕೆ ಇರುತ್ತೆ ನಮ್ಮ ಟೀಂ ಇಂಡಿಯಾ ನಾಯಕನ ಬ್ಯಾಟಿಂಗ್ ವೈಭವ. ಈತನ ಬ್ಯಾಟ್ನಿಂದ ಬರೋ ಒಂದೊಂದು ಶಾಟ್ಗಳು ನಾದ ಸ್ವರದಂತೆ ಗೋಚರವಾಗುತ್ತೆ. ಒಂದೇ ಮಾತಿನಲ್ಲಿ ಹೇಳಬೇಕಾದ್ರೆ ಕೊಹ್ಲಿ ಬ್ಯಾಟಿಂಗ್ ಸುನಾಮಿಯನ್ನೇ ನೆನೆಪಿಸುತ್ತೆ.
ಕೊಹ್ಲಿ ಬ್ಯಾಟಿಂಗ್ ಸೀಕ್ರೆಟ್ ಏನ್ ಗೊತ್ತಾ..?
ಅಷ್ಟಕ್ಕೂ ವಿರಾಟ್ ಕೊಹ್ಲಿ ಈ ಪರಿ ಬ್ಯಾಟಿಂಗ್ ಮಾಡಲು ಕಾರಣವಾದರೂ ಏನು ಗೊತ್ತಾ..? ಅವರು ಕ್ರಿಕೆಟ್ ಲೋಕದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಲು ಕಾರಣವಾದ್ರೂ ಯಾರು ಗೊತ್ತಾ..? ಅವರು ಬಳಸೋ ಅಪರೂಪದ ಬ್ಯಾಟ್.
ಹೌದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಸೋ ಬ್ಯಾಟ್ ಸಾಮಾನ್ಯವಾದುದ್ದಲ್ಲ. ಈ ಬ್ಯಾಟನ್ನ ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಬಳಸುತ್ತಿರುವ ಏಕೈಕ ಆಟಗಾರ ಅಂದ್ರೆ ಅದು ವಿರಾಟ್ ಕೊಹ್ಲಿ ಮಾತ್ರ. ಇವರನ್ನ ಹೊರತು ಪಡಿಸಿದ್ರೆ ಇನ್ಯಾವ ಆಟಗಾರನ ಬಳಿಯೂ ಈ ಬ್ಯಾಟ್ ಇಲ್ಲ.
ಆ ಬ್ಯಾಟ್ಗಾಗಿ ಕೊಹ್ಲಿ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ..?
ಹಾಗಾದ್ರೆ ಕೊಹ್ಲಿ ಏನು ಚಿನ್ನದ ಬ್ಯಾಟನ್ನ ಏನಾದ್ರೂ ಬಳಸುತ್ತಿದ್ದಾರಾ ಅಂತ. ಇಲ್ಲ ಕೊಹ್ಲಿ ಚಿನ್ನದ ಬ್ಯಾಟನ್ನ ಬಳಸುತ್ತಿಲ್ಲ. ಆದ್ರೆ ಚಿನ್ನದಷ್ಟೇ ಬೆಲೆ ಬಾಳುವ ಮರದ ಬ್ಯಾಟನ್ನ ಕೊಹ್ಲಿ ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಆಟಗಾರರು ಬಳಸೋ ಬ್ಯಾಟ್ಗಿಂತ ಇದು ಮೂರು ಪಟ್ಟು ಹೆಚ್ಚು ದುಬಾರಿ. ಅಷ್ಟೇ ಅಲ್ಲ ಈ ಬ್ಯಾಟನ್ನ ತಯಾರಿಸೋಕೆ ವಿಶೇಷ ತಂತ್ರಗಾರಿಕೆ ಇರಬೇಕು.
ಹೌದು ಕೊಹ್ಲಿ ಬ್ಯಾಟ್ ತಯಾರಾಗೋದು ‘ಗ್ರೇಡ್ A ವಿಲ್ಲೋ’ ಮರದಿಂದ. ಈ ಮರ ಇಂಗ್ಲೆಂಡ್ ಬಿಟ್ರೆ ಬೇರೆಲ್ಲೂ ಬೆಳೆಯೋದೇ ಇಲ್ಲ. ವಿಲ್ಲೋ ಮರದ ಒಂದು ತುಂಡಿನಿಂದ ಪೂರ್ತಿ ಬ್ಯಾಟ್ ತಯಾರಾಗುತ್ತೆ.
ಈ ವಿಶೇಷ ಬ್ಯಾಟ್ ತಯಾರಿಸಲು ಎಷ್ಟು ಖರ್ಚಾಗುತ್ತೆ ಎಂದು ತಿಳಿದ್ರೆ ನೀವು ನಿಜಕ್ಕೂ ದಂಗಾಗಿ ಬಿಡ್ತಿರಾ. ಕೊಹ್ಲಿ ತಮ್ಮ ವಿಶೇಷ ಬ್ಯಾಟನ್ನ ಕೊಂಡುಕೊಳ್ಳಲು ನೀಡೋದು ಬರೋಬ್ಬರಿ 23 ಸಾವಿರ ರೂಪಾಯಿ. ಇದು ಉಳಿದ ಆಟಗಾರರು ತಮ್ಮ ಬ್ಯಾಟಿಗೆ ನೀಡೋ ಹಣಕ್ಕಿಂತ ದುಪ್ಪಟ್ಟು.
ಇದೇ ಬ್ಯಾಟ್ನಿಂದಲೇ ಕೊಹ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಿರುವುದು, ದಾಖಲೆಗಳ ಮೇಲೆ ದಾಖಲೆ ಮಾಡ್ತಿರೋದು. ಇಡೀ ವಿಶ್ವದ ಮನ ಗೆಲ್ಲುತ್ತಿರೋದು. ಆದ್ರೆ ಏನೇ ಹೇಳಿ ಕೇವಲ ತಮ್ಮ ಬ್ಯಾಟಿನಿಂದ ಮಾತ್ರ ಕೊಹ್ಲಿ ಈ ಮಟ್ಟಕ್ಕೆ ಯಶಸ್ಸು ಕಂಡಿಲ್ಲ. ಅವರ ಶ್ರಮ ಆ ಬ್ಯಾಟಿಗಿಂತ ದುಪ್ಪಟ್ಟಿದೆ ಅಂತಾರೆ ಅವರ ಅಭಿಮಾನಿಗಳು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.