RCB ತಂಡದ ಇನ್'ಸೈಡರ್ ಮಿಸ್ಟರ್ ನಾಗ್ಸ್ ಕಿತಾಪತಿಗಳಿಂದಲೇ ಫೇಮಸ್ ಆದವರು. ತಂಡದ ಸದಸ್ಯರ ಕಾಲೆಳೆಯುತ್ತಾ, ಜನರನ್ನು ರಂಜಿಸುತ್ತಿರುತ್ತಾರೆ. ಕೆಲವೊಂದು ಬಾರಿ ತಂಡದ ಸದಸ್ಯರು ಇವರ ಜೋಕ್ಸ್ ಕೇಳಿ ಖುಷಿಪಟ್ಟರೆ ಮತ್ತೆ ಕೆಲವೊಮ್ಮೆ ಸಿಟ್ಟುಗೊಳ್ಳುತ್ತಾರೆ. ಜನರಿಗಂತೂ ಈತನ ಚಟುವಟಿಕೆಗಳು ಅಚ್ಚುಮೆಚ್ಚು.
ಬೆಂಗಳೂರು(ಎ.08):RCB ತಂಡದ ಇನ್'ಸೈಡರ್ ಮಿಸ್ಟರ್ ನಾಗ್ಸ್ ಕಿತಾಪತಿಗಳಿಂದಲೇ ಫೇಮಸ್ ಆದವರು. ತಂಡದ ಸದಸ್ಯರ ಕಾಲೆಳೆಯುತ್ತಾ, ಜನರನ್ನು ರಂಜಿಸುತ್ತಿರುತ್ತಾರೆ. ಕೆಲವೊಂದು ಬಾರಿ ತಂಡದ ಸದಸ್ಯರು ಇವರ ಜೋಕ್ಸ್ ಕೇಳಿ ಖುಷಿಪಟ್ಟರೆ ಮತ್ತೆ ಕೆಲವೊಮ್ಮೆ ಸಿಟ್ಟುಗೊಳ್ಳುತ್ತಾರೆ. ಜನರಿಗಂತೂ ಈತನ ಚಟುವಟಿಕೆಗಳು ಅಚ್ಚುಮೆಚ್ಚು.
ಇನ್ನು ಕಳೆದ ಬಾರಿ ಎಬಿಡಿಯನ್ನು ಕನ್ನಡದಲ್ಲೇ ಮಾತನಾಡಿಸಿದ್ದ ನಾಗ್ಸ್ ಕನ್ನಡಿರ ಮನಗೆದ್ದಿದ್ದರು. ಆದರೆ ಈ ಬಾರಿ ದಾಖಲೆಗಳ ವೀರ ವಿರಾಟ್ ಕೊಹ್ಲಿಯೂ ನಾಗ್ಸ್'ನೊಂದಿಗೆ ಕನ್ನಡದಲ್ಲಿ ಮಾತನಾಡಿದ್ದಾರೆ. ಸದ್ಯ ೀ ವಿಡಿಯೋ ಸಾಮಾಜಿ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿರಾಟ್'ನನ್ನು ಮಾತನಾಡಿಸ ಹೊರಟ ನಾಗ್ಸ್ ಮೊದಲಿಗೆ 'ನಮಸ್ಕಾರ' ಎಂದು ವಿಶ್ ಮಾಡುತ್ತಾರೆ ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್ ಕನ್ನಡಿಗನಂತೆ 'ನಮಸ್ಕಾರ ನಾಗ್ಸ್' ಎನ್ನುತ್ತಾರೆ. ಬಳಿಕ 'ಹೇಗಿದ್ದೀರಿ?' ಎಂದು ಪ್ರಶ್ನಿಸಿದ ನಾಗ್ಸ್'ಗೆ ಉತ್ತರಿಸಿದ ವಿರಾಟ್ 'ನಾನು ಚೆನ್ನಾಗಿದ್ದೇನೆ' ಎಂದು ಕನ್ನಡದಲ್ಲಿಯೇ ಉತ್ತರಿಸುತ್ತಾರೆ. ಬೆಂಗಳೂರಿನ RCB ತಂಡದ ನಾಯಕ ವಿರಾಟ್ ಕನ್ನಡದಲ್ಲಿ ಮಾತನಾಡಿರುವುದು ಸದ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ ಅಲ್ಲದೇ ಖುಷಿಯನ್ನೂ ನೀಡಿದೆ.