
ಕೋಲ್ಕತಾ(ಏ.08): ಪತ್ನಿ ನತಾಷಳಿಂದಲೇ ತನ್ನ ಕೊಲೆಯಾಗುತ್ತಿತ್ತೆಂಬ ವಿನೋದದ ಸಂಗತಿಯೊಂದನ್ನು ಕೋಲ್ಕತಾ ನೈಟ್‌ರೈಡರ್ಸ್ (ಕೆಕೆಆರ್) ನಾಯಕ ಗೌತಮ್ ಗಂಭೀರ್ ಹಂಚಿಕೊಂಡಿದ್ದಾರೆ. ಕೆಕೆಆರ್‌ನ ವಿಶೇಷ ಸಂಚಿಕೆಯೊಂದರಲ್ಲಿ ಮಾತನಾಡಿರುವ ಗಂಭೀರ್ ‘‘ಬಟರ್ ಚಿಕ್ಕನ್, ದಾಲ್ ಇಷ್ಟಪಡುವ ಪಕ್ಕಾ ಪಂಜಾಬಿ ನಾನು. ನನಗೆ ಪಂಜಾಬಿ ಸಂಗೀತ ಇಷ್ಟ, ಆದರೆ ಡಿಜೆಗಳ ಅಬ್ಬರ ಅಂದರೆ ಆಗದು. ತಂಡದ ಮಾಲೀಕ ಶಾರುಖ್ ಖಾನ್ ಅಷ್ಟೇ ಅಲ್ಲ, ನನ್ನ ಪತ್ನಿ ನತಾಷಳಿಗೂ ಮಣಿದಿರಲಿಲ್ಲ. ಆದರೆ ಐಪಿಎಲ್ ಜಾಹೀರಾತು ಚಿತ್ರೀಕರಣವೊಂದರಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದೇನೆ. ಈ ವಿಷಯ ನನ್ನ ಮಡದಿಗೇನಾದರೂ ಗೊತ್ತಾದರೆ ನನ್ನನ್ನ ಕೊಂದರೂ ಆಶ್ಚರ್ಯವಿಲ್ಲ’’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.