
ವಿರಾಟ್ ಕೊಹ್ಲಿ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿಯೇ. ಅವರು ಕಳಪೆ ಫಾರ್ಮ್ನಲ್ಲಿದ್ದಾರೆ ಅನ್ನುವಷ್ಟರಲ್ಲಿ ಒಂದು ಬಿಗ್ ಇನ್ನಿಂಗ್ಸ್ ಆಡಿ ಬಿಡ್ತಾರೆ. ಅಷ್ಟೇ ಅಲ್ಲ. ಅವರೇ ಮ್ಯಾಚ್ ವಿನ್ನರ್ ಆಗ್ತಾರೆ. ಒಂಡೇ ಕ್ರಿಕೆಟ್ನಲ್ಲಿ ಅವರು ಹೋಗುತ್ತಿರುವ ವೇಗ ನೋಡಿದರೆ ದಿಗ್ಗಜರ ರೆಕಾರ್ಡ್ಗಳನ್ನೆಲ್ಲಾ ಪುಡಿಪುಡಿ ಮಾಡುವುದರಲ್ಲಿ ಅನುಮಾನವಿಲ್ಲ. ಸಚಿನ್ ತೆಂಡೂಲ್ಕರ್ ಅವರ ಒಂಡೇ ರನ್ ರೆಕಾರ್ಡ್ ಬ್ರೇಕ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಕ್ರಿಕೆಟ್ ದೇವರ ಬಹುತೇಕ ರೆಕಾರ್ಡ್ಗಳನ್ನ ಮುರಿಯೋದು ವಿರಾಟ್ ಕೊಹ್ಲಿಯೇ.
ಚೇಸಿಂಗ್ನಲ್ಲಿ ಭಾರತ ಗೆದ್ದ ಪಂದ್ಯಗಳಲ್ಲಿ ಕೊಹ್ಲಿ 4 ಸಾವಿರ ರನ್
ಮೊನ್ನೆ ಶ್ರೀಲಂಕಾ ವಿರುದ್ಧ ಶಿಖರ್ ಧವನ್ಗೆ ಸೂಪರ್ ಸಾಥ್ ನೀಡಿದ್ದು ನಾಯಕ ವಿರಾಟ್ ಕೊಹ್ಲಿ. ಅಜೇಯ 82 ರನ್ ಹೊಡೆಯೋ ಮೂಲ್ಕ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಲು ನೆರವಾದ್ರು. 9 ವರ್ಷಗಳ ಹಿಂದೆ ಡಂಬುಲ್ಲಾದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಿರಾಟ್, ಅಲ್ಲಿ ಒಂದೇ ಒಂದು ಅರ್ಧಶತಕ ದಾಖಲಿಸಿರಲಿಲ್ಲ. ಆದ್ರೆ ಮೊನ್ನೆ ಅಜೇಯ 82 ರನ್ ಬಾರಿಸಿ ದಾಖಲೆ ನಿರ್ಮಿಸಿದ್ರು.
ಚೇಸಿಂಗ್ನಲ್ಲಿ ಸದ್ಯ ವಿರಾಟ್ ಕೊಹ್ಲಿಯೇ ಕಿಂಗ್. ಚೇಸಿಂಗ್ ವೇಳೆ 16 ಸೆಂಚುರಿಗಳನ್ನ ಸಿಡಿಸಿದ್ದಾರೆ. ಇನ್ನು 18 ಹಾಫ್ ಸೆಂಚುರಿ ದಾಖಲಿಸಿದ್ದಾರೆ. ಚೇಸಿಂಗ್ನಲ್ಲಿ ವ್ಯರ್ಥವಾಗಿರೋದು ಅವರ ಒಂದೇ ಒಂದು ಸೆಂಚುರಿ ಮಾತ್ರ. ಮೊನ್ನೆ 82 ರನ್ ಹೊಡೆಯೋ ಮೂಲ್ಕ ಚೇಸಿಂಗ್ನಲ್ಲಿ ಟೀಂ ಇಂಡಿಯಾ ಗೆದ್ದ ಪಂದ್ಯಗಳಲ್ಲಿ 4 ಸಾವಿರ ರನ್ ಹೊಡೆದ ಸಾಧನೆ ಮಾಡಿದ್ದಾರೆ. ವರ್ಲ್ಡ್ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್ ಬಿಟ್ರೆ ಈ ಸಾಧನೆ ಮಾಡಿರೋದು ವಿರಾಟ್ ಕೊಹ್ಲಿ ಮಾತ್ರ.
ಚೇಸಿಂಗ್ ವೇಳೆ ಅವರು ಪ್ರತಿನಿಧಿಸಿರುವ ತಂಡ ಗೆದ್ದಿರುವ ಪಂದ್ಯಗಳಲ್ಲಿ ಗರಿಷ್ಠ ರನ್ ಹೊಡೆದಿರುವವರು ಇಂತಿದ್ದಾರೆ. ಸಚಿನ್ ತೆಂಡೂಲ್ಕರ್ 55.45ರ ಸರಾಸರಿಯಲ್ಲಿ 5490 ರನ್ ಹೊಡೆದಿದ್ದಾರೆ. ರಿಕಿ ಪಾಂಟಿಂಗ್ 57.34ರ ಸರಾಸರಿಯಲ್ಲಿ 4186 ರನ್ ಬಾರಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ 100.02ರ ಸರಾಸರಿಯಲ್ಲಿ 4001 ರನ್ ಕಲೆಹಾಕಿದ್ದಾರೆ. ಇನ್ನು 186 ರನ್ ಹೊಡೆದ್ರೆ ರಿಕಿ ಪಾಂಟಿಂಗ್ ದಾಖಲೆಯನ್ನ ವಿರಾಟ್ ಮುರಿಯಲಿದ್ದಾರೆ.
ಚೇಸಿಂಗ್ನಲ್ಲಿ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 100
ಆಶ್ಚರ್ಯವಾದ್ರೂ ನಿಜ. ಟೀಂ ಇಂಡಿಯಾ ಚೇಸಿಂಗ್ ಮಾಡಿರುವ ಪಂದ್ಯಗಳಲ್ಲಿ ವಿರಾಟ್ ಸರಾಸರಿ 67.32. ಸ್ಟ್ರೈಕ್ರೇಟ್ 93.71. ಆದ್ರೆ ಭಾರತ ಗೆದ್ದಿರೋ ಮ್ಯಾಚ್ಗಳಲ್ಲಿ ಕೊಹ್ಲಿ ಸರಾಸರಿ ಬರೋಬ್ಬರಿ ನೂರು. 98ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲಿಗೆ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿಯನ್ನ ಕಂಟ್ರೋಲ್ ಮಾಡಲು ಸಾಧ್ಯವೇ ಇಲ್ಲ. ಸದ್ಯ ವರ್ಲ್ಡ್ ಕ್ರಿಕೆಟ್ನಲ್ಲಿ ಅವರೇ ಚೇಸಿಂಗ್ ಕಿಂಗ್.
3ನೇ ಕ್ರಮಾಂಕ ಯಾರಿಗೂ ಬಿಟ್ಟುಕೊಡಲ್ಲ
ನಿಮಗೆ ಗೊತ್ತಿರಬಹುದು. ಓಪನರ್ ಆಗಿದ್ದ ಸೌರವ್ ಗಂಗೂಲಿ, ನಾಯಕನಾದ್ಮೇಲೆ ವೀರೇಂದ್ರ ಸೆಹ್ವಾಗ್ಗೆ ತಮ್ಮ ಸ್ಥಾನ ಬಿಟ್ಟುಕೊಟ್ರು. ತಂಡದ ಬ್ಯಾಟಿಂಗ್ ಲೈನ್ ಅಪ್ ಹಾಗೂ ಮಿಡ್ಲ್ ಆರ್ಡರ್ ಬಲಿಷ್ಠವಾಗಿ ಅನ್ನೋ ಕಾರಣಕ್ಕೆ ದಾದಾ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಈಗ ಕೊಹ್ಲಿ ಸಹ 3ನೇ ಕ್ರಮಾಂಕವನ್ನ ಕೆಎಲ್ ರಾಹುಲ್ಗೆ ಬಿಟ್ಟುಕೊಟ್ಟು, 4ನೇ ಕ್ರಮಾಂಕದಲ್ಲಿ ಆಡ್ತಾರೆ ಅನ್ನೋ ಸುದ್ದಿ ಇತ್ತು. ಆದ್ರೆ ಮೊನ್ನೆಯ ಆಟ ನೋಡಿದ್ರೆ ವಿರಾಟ್ ತಮ್ಮ 3ನೇ ಕ್ರಮಾಂಕವನ್ನ ಯಾರಿಗೂ ಬಿಟ್ಟುಕೊಡುವಂತೆ ಕಾಣುತ್ತಿಲ್ಲ. ಅವರೇ ಆ ಕ್ರಮಾಂಕದಲ್ಲಿ ಫಿಕ್ಸ್ ಆಗಿದ್ದಾರೆ. ಯಾರು ಯಾವ್ದೇ ಕ್ರಮಾಂಕದಲ್ಲಿ ಆಡ್ಲಿ. ನಾನ್ ಮಾತ್ರ ನನ್ನ ಫಸ್ಟ್ ಡೌನ್ ಪ್ಲೇಸ್ ಅನ್ನ ಯಾರಿಗೂ ಬಿಟ್ಟುಕೊಡಲ್ಲ ಅಂತಿದ್ದಾರೆ ವಿರಾಟ್. ಒಟ್ನಲ್ಲಿ ಕೊಹ್ಲಿ ಆರ್ಭಟ ನೋಡ್ತಿದ್ರೆ ಸ್ವಲ್ಪ ದಿನಗಳಲ್ಲಿ ಸಚಿನ್-ಪಾಂಟಿಂಗ್ ರೆಕಾರ್ಡ್ ಬ್ರೇಕ್ ಮಾಡಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.