ಎಡವಿದ ಕೊಹ್ಲಿ: ದಾಖಲೆಯ ಸರದಾರ ಕೊಹ್ಲಿಗೆ ಧೋನಿ ನಿರ್ಮಿಸಿದ ಈ ದಾಖಲೆ ಮುರಿಯುವುದು ಅಸಾಧ್ಯ!

By Suarna Web DeskFirst Published Feb 27, 2017, 3:08 PM IST
Highlights

ಧೋನಿ ಟೆಸ್ಟ್ ಪಂದ್ಯಕ್ಕೆ ವಿದಾಯ ಹೇಳಲು ನಿರ್ಧರಿಸಿದ ಮರುಕ್ಷಣದಿಂದಲೇ ಈ ವಿಭಾಗದ ನಾಯಕ ಸ್ಥಾನವನ್ನು ಸ್ಪೋಟಕ ಆಟಗಾರ ವಿರಾಟ್ ಕೊಹ್ಲಿ ಅಂಕರಿಸಿದ್ದರು. ತನ್ನ 'ವಿರಾಟ' ಕೋಪಕ್ಕೆ ಫೇಮಸ್ ಆಗಿದ್ದ ಕೊಹ್ಲಿ, ಟೆಸ್ಟ್ ವಿಭಾಗದ ಕ್ಯಾಪ್ಟನ್ ಆಗುವಷ್ಟರಲ್ಲಿ ತನ್ನ ವರ್ತನೆಯಲ್ಲಿ ತಂದುಕೊಂಡ ಬದಲಾವಣೆಯಿಂದ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದ್ದರು. ಇಷ್ಟೇ ಅಲ್ಲದೆ ಈ ಹೊಸ ಜವಾಬ್ದಾರಿ ಸ್ವೀಕರಿಸಿದ ಬಳಿಕ ಕೊಹ್ಲಿಯ ಬಲಗೈ ಬ್ಯಾಟಿಂಗ್ ಪ್ರದರ್ಶನದಲ್ಲೂ ಗಣನೀಯ ಬೆಳವಣಿಗೆ ಕಂಡುಬಂದಿತ್ತು.

ತನ್ನ ಅದ್ಭುತ ಆಟದ ಮೂಲಕ ಜನರ ಮನಗೆದ್ದ ಸ್ಪೋಟಕ ಆಟಗಾರ ಕೊಹ್ಲಿ ಕ್ಯಾಪ್ಟನ್ಸಿ ಪಡೆದ ಬಳಿಕ ತನ್ನ ಹೊಸ ಶೈಲಿಯನ್ನು ಪರಿಚಯಿಸಿ ತಂಡದ ಆಟಗಾರರಲ್ಲೂ ಹೊಸ ಹುರುಪನ್ನು ಮೂಡಿಸಿದ್ದರು. ಇದೇ ಉತ್ಸಾಹವನ್ನು ಕಾಯ್ದುಕೊಂಡಿದ್ದ ಟೀಂ ಇಂಡಿಯಾ ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದವರೆಗೂ ಅದ್ಭುತ ಪ್ರದರ್ಶನವನ್ನು ನೀಡಿತ್ತು. ಆದರೆ ಅದ್ಯಾಕೋ ಏನೋ ಸೋಲಿಲ್ಲದ ಸರದಾರನಂತಿದ್ದ ಕೊಹ್ಲಿ ಪಡೆ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನುಭವಿಸಿತ್ತು.

ಹಾಲಿ ಕ್ಯಾಪ್ಟನ್ ಕನಸಾಗಿಯೇ ಉಳಿಯಿತು ಮಾಜಿ ಕ್ಯಾಪ್ಟನ್ ನಿರ್ಮಿಸಿದ ರೆಕಾರ್ಡ್

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪಡೆ, ಕೊಹ್ಲಿ ಬಾಯ್ಸ್'ಗೆ ಹೀನಾಯ ಸೋಲುಣಿಸಿತ್ತು, ಈ ಮೂಲಕ ಟೀಂ ಇಂಡಿಯಾಗೆ ಶಾಕ್ ನೀಡಿತ್ತು. ಗಮನಿಸಬೇಕಾದ ವಿಚಾರವೆಂದರೆ ಈ ಹೀನಾಯ ಸೋಲು ಒಂದೆಡೆ ಟೀಂ ಇಂಡಿಯಾಗೆ ಶಾಕ್ ನೀಡಿದರೆ ಮತ್ತೊಂದೆಡೆ ದಾಖಲೆಗಳನ್ನು ಮುರಿಯುವುದರಲ್ಲಿ ನಿಸ್ಸೀಮನಾಗಿದ್ದ ಕೊಹ್ಲಿಯ ಕನಸಿಗೆ ತಣ್ಣೀರೆರಚಿದೆ. ಆಸ್ಟ್ರೇಲಿಯಾ ತಂಡ ತನ್ನ ಗೆಲುವಿನ ಮೂಲಕ ಕೊಹ್ಲಿಗೆ ತನ್ನ ಜೀವಮಾನವಿಡೀ ಮಾಜಿ ಕ್ಯಾಪ್ಟನ್ ಧೋನಿ ನಿರ್ಮಿಸಿದ್ದ ಅಪೂರ್ವ ದಾಖಲೆಯೊಂದನ್ನು ಮುರಿಯದಿರುವಂತೆ ಮಾಡಿದೆ.

ಕೂಲ್ ಕ್ಯಾಪ್ಟನ್'ನ ನಾಯಕತ್ವದಲ್ಲಿ ಟೀಂ ಇಂಡಿಯಾ ತವರುನಾಡಿನಲ್ಲಿ ಆಸ್ಟ್ರೇಲಿಯನ್ನರ ವಿರುದ್ಧ ನಡೆದ ಯಾವೊಂದೂ ಪಂದ್ಯದಲ್ಲಿ ಸೋಲನುಭವಿಸಿರಲಿಲ್ಲ. ಕಂಗರೂಗಳ ವಿರುದ್ಧ ನಡೆದ 8 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಅದ್ಭುತ ದಾಖಲೆ ಬರೆದಿದ್ದರು ಧೋನಿ ಬಾಯ್ಸ್.

ಕೊಹ್ಲಿ ಪಡೆ ಈಗಲೂ ಕ್ರಿಕೆಟ್ ಪ್ರೇಮಿಗಳ ಫೇವರಿಟ್ ಟೀಂ ಯಾಕೆಂದರೆ ನಾಯಕನೇ ಓರ್ವ ಅಸಾಧಾರಣ ಆಟಗಾರ. ಆತನ ಆಟವನ್ನು ವೀಕ್ಷಿಸುವುದೇ ಒಂದು ರೀತಿಯ ಕಿಕ್ ಕೊಡುತ್ತದೆ. ಇನ್ನು ಒಂದಾದ ಬಳಿಕ ಮತ್ತೊಂದರಂತೆ ದಿಗ್ಗಜರ ದಾಖಲೆ ಮುರಿಯುವುದು ಕೊಹ್ಲಿಗೆ ಸಾಮಾನ್ಯವಾಗಿದೆ. ಅದೇನಿದ್ದರೂ ಮಾಜಿ ಕ್ಯಾಪ್ಟನ್ ನಿರ್ಮಿಸಿದ ಈ ಒಂದು ದಾಖಲೆಯನ್ನು ಮಾತ್ರ  ಹಾಲಿ ಕ್ಯಾಪ್ಟನ್ ಏನು ಮಾಡಿದರೂ ಬ್ರೇಕ್ ಮಾಡಲು ಸಾಧ್ಯವೇ ಇಲ್ಲ. ಬರೋಬ್ಬರಿ 13 ವರ್ಷಗಳ ಬಳಿಕ ಕಾಂಗರೂಗಳು ಟೀಂ ಇಂಡಿಯಾವನ್ನು, ತವರುನಾಡಿನಲ್ಲೇ ಸೋಲಿಸಿ ತಮ್ಮ ನಾಡಿಗೆ ಮರಳಿದ್ದಾರೆ. ಈಗ ಕಾಲ ಮಿಂಚಿ ಹೋಗಿದೆ ಇನ್ನೇನಿದ್ದರೂ ಕೊಹ್ಲಿ ಉಳಿದ ದಾಖಲೆಗಳ ಮೇಲೆ ದೃಷ್ಟಿ ನೆಡಬೇಕಾಗಿದೆ. 

click me!