ಡೆಲ್ಲಿ ಪಾಲಿಗಿಂದು ಮಾಡು ಇಲ್ಲವೇ ಮಡಿ ಪಂದ್ಯ

First Published May 2, 2018, 12:42 PM IST
Highlights

ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ, ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದ್ದು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ನವದೆಹಲಿ[ಮೇ.02] ಐಪಿಎಲ್ 2018ರ ಪ್ಲೇ-ಆಫ್ ರೇಸ್‌'ನಿಂದ ಹೊರಬೀಳುವ ಮೊದಲ ತಂಡ ಎನ್ನುವ ಕುಖ್ಯಾತಿಗೆ ಡೆಲ್ಲಿ ಡೇರ್‌'ಡೆವಿಲ್ಸ್ ಗುರಿಯಾಗುವ ಭೀತಿಯಲ್ಲಿದೆ. ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ, ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದ್ದು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಈ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಸೋತಿರುವ ಡೆಲ್ಲಿ, ಲೀಗ್ ಹಂತದಲ್ಲಿ ಇನ್ನುಳಿದ 6 ಪಂದ್ಯಗಳಲ್ಲಿ ಗೆದ್ದರಷ್ಟೇ ಪ್ಲೇ-ಆಫ್‌'ಗೇರುವ ಕನಸು ಜೀವಂತವಾಗಿ ಉಳಿಯಲಿದೆ. ಹೀಗಾಗಿ ತಂಡ ಇಲ್ಲಿಂದಾಚೆಗೆ ಪ್ರತಿ ಪಂದ್ಯವನ್ನೂ ನಾಕೌಟ್ ಪಂದ್ಯವೆಂದೇ ಪರಿಗಣಿಸಬೇಕಿದೆ.
ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಎಡವುತ್ತಿದೆ. 7 ಪಂದ್ಯಗಳಿಂದ 6 ಅಂಕ ಗಳಿಸಿರುವ ರಾಜಸ್ಥಾನ, ಗೆಲುವಿನ ಲಯಕ್ಕೆ ಮರಳಲು ಹಾತೊರೆಯುತ್ತಿದೆ. ಪ್ಲೇ-ಆಫ್ ಸ್ಥಾನದ ದೃಷ್ಟಿಯಿಂದ ರಹಾನೆ ನೇತೃತ್ವದ ತಂಡಕ್ಕೂ ಇದು ಮಹತ್ವದ ಪಂದ್ಯವೆನಿಸಿದೆ. 
ಶ್ರೇಯಸ್ ಮೇಲೆ ಅವಲಂಬನೆ: ನೂತನ ನಾಯಕ ಶ್ರೇಯಸ್ ಅಯ್ಯರ್ ಡೆಲ್ಲಿಯ ಬ್ಯಾಟಿಂಗ್ ಆಧಾರವೆನಿಸಿದ್ದಾರೆ. ರಿಶಬ್, ಪೃಥ್ವಿ, ಮ್ಯಾಕ್ಸ್‌'ವೆಲ್, ಮನ್ರೊ ಮೇಲೂ ಭಾರೀ ಒತ್ತಡವಿದೆ. 
ತಾರೆಯರಿದ್ದರೂ ಮಿಂಚದ ರಾಯಲ್ಸ್: ರಾಜಸ್ಥಾನ ರಾಯಲ್ಸ್‌ನಲ್ಲಿ ಟಿ20 ತಜ್ಞರ ದಂಡೇ ಇದ್ದರೂ, ತಂಡ ಪ್ರಾಬಲ್ಯ ಮೆರೆಯಲು ಸಾಧ್ಯವಾಗುತ್ತಿಲ್ಲ. ಸ್ಟೋಕ್ಸ್ ಹಾಗೂ ಬಟ್ಲರ್ ವೈಫಲ್ಯ ತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೌಲರ್‌'ಗಳು ದುಬಾರಿಯಾಗುತ್ತಿದ್ದಾರೆ. ಸ್ಥಿರತೆ ಕಾಯ್ದು ಕೊಳ್ಳಲು ಪರದಾಡುತ್ತಿರುವುದೇ ರಾಯಲ್ಸ್'ನ ಈ ಸ್ಥಿತಿಗೆ ಕಾರಣ. 

click me!