ಹಾಕಿ ಟೀಂ ಇಂಡಿಯಾ ಕೋಚ್’ಗಳು ಅದಲು-ಬದಲು..!

 |  First Published May 2, 2018, 12:10 PM IST

ಹರೇಂದರ್ ಮಾರ್ಗದರ್ಶನದಲ್ಲಿ ಭಾರತ ವನಿತೆಯರ ಹಾಕಿ ತಂಡ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು ಮರಿನೆ ಮಾರ್ಗದರ್ಶನದ ಪುರುಷರ ಹಾಕಿ ತಂಡ 5ನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿತ್ತು. ಅಲ್ಲದೇ 2006ರ ಕಾಮನ್’ವೆಲ್ತ್ ಗೇಮ್ಸ್ ಬಳಿಕ ಇದೇ ಮೊದಲ ಬಾರಿಗೆ ಪುರುಷರ ಹಾಕಿ ತಂಡ ಬರಿಗೈನಲ್ಲಿ ತವರಿನಲ್ಲಿ ಮರಳಿತ್ತು.


ನವದೆಹಲಿ[ಮೇ.02]: ಭಾರತೀಯ ಹಾಕಿ ಗೊಂದಲದ ಗೂಡಾಗಿದೆ. ರಾಷ್ಟ್ರೀಯ ಮಹಿಳಾ ತಂಡದ ಕೋಚ್ ಹರೇಂದರ್ ಸಿಂಗ್, ಪುರುಷರ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ. 

6 ತಿಂಗಳ ಹಿಂದಷ್ಟೇ ಪುರುಷರ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ಸೋರ್ಡ್ ಮರಿನೆ, ಮತ್ತೊಮ್ಮೆ ಮಹಿಳಾ ತಂಡದ ಕೋಚ್ ಆಗಿದ್ದಾರೆ. ಕಳೆದ ತಿಂಗಳು ನಡೆದ ಕಾಮನ್‌’ವೆಲ್ತ್ ಗೇಮ್ಸ್‌’ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ತೋರಿದ್ದೇ ಇದಕ್ಕೆ ಕಾರಣ. ಹರೇಂದರ್ ಮಾರ್ಗದರ್ಶನದಲ್ಲಿ ಭಾರತ ವನಿತೆಯರ ಹಾಕಿ ತಂಡ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು ಮರಿನೆ ಮಾರ್ಗದರ್ಶನದ ಪುರುಷರ ಹಾಕಿ ತಂಡ 5ನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿತ್ತು. ಅಲ್ಲದೇ 2006ರ ಕಾಮನ್’ವೆಲ್ತ್ ಗೇಮ್ಸ್ ಬಳಿಕ ಇದೇ ಮೊದಲ ಬಾರಿಗೆ ಪುರುಷರ ಹಾಕಿ ತಂಡ ಬರಿಗೈನಲ್ಲಿ ತವರಿನಲ್ಲಿ ಮರಳಿತ್ತು 

Tap to resize

Latest Videos

2 ದಿನಗಳ ಹಿಂದಷ್ಟೇ ಭಾರತ ತಂಡದ ಉನ್ನತ ಪ್ರದರ್ಶನ ಸಮಿತಿಯ ಮುಖ್ಯಸ್ಥ ಡೇವಿಡ್ ಜಾನ್, ಮರಿನೆ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದಿದ್ದರು.

click me!