
ಮ್ಯಾಂಚೆಸ್ಟರ್ [ಜು.4] ಇಂಗ್ಲೆಂಡ್ ನೀಡಿದ ಗುರಿ ಬೆನ್ನು ಹತ್ತಿದ ಭಾರತ ಎಂಟು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತ್ತು. ವಿರಾಟ್ ಕೊಹ್ಲಿ ತಮ್ಮ 3 ನೇ ಕ್ರಮಾಂಕ ತ್ಯಜಿಸಿ ರಾಹುಲ್ ಗೆ ಬಿಟ್ಟು ಕೊಟ್ಟಿದ್ದರು. ಅದಕ್ಕೆ ತಕ್ಕುದಾದ ಆಟ ಕೂಡ ರಾಹುಲ್ ಅವರಿಂದ ದೊರೆಯಿತು.
ಶತಕ ದಾಖಲಿಸಿದ ರಾಹುಲ್ ಟಿ-20ಯಲ್ಲಿ ಎರಡು ದ್ವಿಶತಕ ಸಾಧನೆ ಮಾಡಿದ ರೋಹಿತ್ ಶರ್ಮಾ ಅವರೊಂದಿಗೆ ಸೇರಿಕೊಂಡರು. ಈ ಹಿಂದೆ ರಾಹುಲ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 110 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು.
ಸೆಂಚುರಿ ಸಿಡಿಸಿದ ಬಳಿಕ ಕೆಎಲ್ ರಾಹುಲ್ ಸೆಲೆಬ್ರೇಷನ್ ಸ್ಟೈಲ್ ಸೀಕ್ರೆಟ್ ಎನು?
ಪಾಕಿಸ್ತಾನದ ಬಾಬರ್ ಅಜಮ್ ದಾಖಲೆ ಪುಡಿ
ಟಿ-20 ವಿಭಾಗದಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿದ ದಾಖಲೆಯೂ ರಾಹುಲ್ ಪಾಲಾಯಿತು. ಪಾಕಿಸ್ತಾನದ ಬಾಬರ್ ಅಜಮ್ ಸರಾಸರಿ 53 ಇದ್ದರೆ ಒಂದು ಹೆಜ್ಜೆ ಮುಂದೆ ಹೋದ ರಾಹುಲ್ ತಮ್ಮ ಸರಾಸರಿಯನ್ನು 55ಕ್ಕೆ ಏರಿಸಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.