ಕ್ರಿಸ್ ಗೇಲ್ ಬಳಿ ಕ್ಷಮೆ ಯಾಚಿಸಿದ ಕೆಎಲ್ ರಾಹುಲ್!

Published : Sep 22, 2018, 08:51 PM IST
ಕ್ರಿಸ್ ಗೇಲ್ ಬಳಿ ಕ್ಷಮೆ ಯಾಚಿಸಿದ ಕೆಎಲ್ ರಾಹುಲ್!

ಸಾರಾಂಶ

ವೆಸ್ಟ್ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಆತ್ಮೀಯ ಗೆಳೆಯರು. ಐಪಿಎಲ್ ಟೂರ್ನಿಯಲ್ಲಿ ಇಬ್ಬರೂ ಜೊತೆಯಾಗಿ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದಾರೆ. ಇಷ್ಟಾದರೂ ಕೆಎಲ್ ರಾಹುಲ್, ಗೇಲ್ ಬಳಿ ಕ್ಷಮೆ ಯಾಚಿಸಿದ್ದೇಕೆ? ಇಲ್ಲಿದೆ.

ದುಬೈ(ಸೆ.22): ವೆಸ್ಟ್ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ಗೆ ಭಾರತದಲ್ಲಿ ಗರಿಷ್ಠ ಅಭಿಮಾನಿಗಳಿದ್ದಾರೆ. ಇಷ್ಟೇ ಅಲ್ಲ, ಬಹುತೇಕ ಭಾರತೀಯ ಕ್ರಿಕೆಟಿಗರು ಗೇಲ್ ಆತ್ಮೀಯ ಮಿತ್ರರು. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದ ಗೇಲ್‌ಗೆ, ತಂಡದ ಸದಸ್ಯ ಕೆಎಲ್ ರಾಹುಲ್ ಹೆಚ್ಚು ಆತ್ಮೀಯ.

ಗೇಲ್ ಹಾಗೂ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದಾರೆ. ಕಳೆದ ಬಾರಿ ಕಿಂಗ್ಸ್ ಇಲೆವೆನ್ ಪರ ಜೊತೆಯಾಗಿ ಕಣಕ್ಕಿಳಿದಿದ್ದರು. ಗೇಲ್ ಆತ್ಮೀಯ ಗೆಳೆಯನಾಗಿರೋ ರಾಹುಲ್ ಇದೀಗ ಯುನಿವರ್ಸ್ ಬಾಸ್‌ ಬಳಿ ಕ್ಷಮೆ ಯಾಚಿಸಿದ್ದಾರೆ.

ಸೆಪ್ಟೆಂಬರ್ 21 ಕ್ರಿಸ ಗೇಲ್ ಹುಟ್ಟಹಬ್ಬ. ಆದರೆ ಕೆಎಲ್ ರಾಹುಲ್ ಸೆಪ್ಟೆಂಬರ್ 22ರಂದು ಗೇಲ್‌ಗೆ ಹುಟ್ಟಹಬ್ಬದ ಶುಭಕೋರಿದ್ದಾರೆ. ಶುಭಾಶಯಕ್ಕೂ ಮುನ್ನ ರಾಹುಲ್ ದಿನ ಕಳೆದ ಮೇಲೆ ಶುಭಾಶಯ ಕೋರುತ್ತಿರುವುದಕ್ಕೆ ಕ್ಷಮೆ ಕೇಳಿದ್ದಾರೆ.

 

 

ಸದ್ಯ ಏಷ್ಯಾಕಪ್ ಟೂರ್ನಿಗಾಗಿ ದುಬೈನಲ್ಲಿರುವ ಕೆಎಲ್ ರಾಹುಲ್ ಕೆಲವೇ ದಿನಗಳ ಬಳಿಕ ಕ್ರಿಸ್ ಗೇಲ್ ವಿರುದ್ಧವೇ ಕಣಕ್ಕಿಳಿಯಲಿದ್ದಾರೆ. ಏಷ್ಯಾಕಪ್ ಟೂರ್ನಿ ಬಳಿಕ ಭಾರತ, ವೆಸ್ಟ್ಇಂಡೀಸ್ ವಿರುದ್ಧ ಸರಣಿ ಆಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
John Cena ಕೊನೆಯ ಮ್ಯಾಚ್ ಯಾವಾಗ? ಎದುರಾಳಿ ಯಾರು? ಲೈವ್ ಸ್ಟ್ರೀಮಿಂಗ್ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್