ಈ ಬಾರಿ ಕೆಕೆಆರ್'ಗೆ ನೂತನ ಸಾರಥಿ

By Suvaran Web DeskFirst Published Mar 4, 2018, 11:42 AM IST
Highlights

ಬಾಲಿವುಡ್ ನಟ ಶಾರೂಕ್ ಖಾನ್ ಮಾಲಿಕತ್ವದ ಕೆಕೆಆರ್ ತಂಡ ಐಪಿಎಲ್ ಟೂರ್ನಿಗಳಲ್ಲಿ 2012 ಹಾಗೂ 2014ರಲ್ಲಿ ಚಾಂಪಿಯನ್ ಆಗಿತ್ತು.

ಮುಂಬೈ(ಮಾ.04): ಕಳೆದ ಆವೃತ್ತಿಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಗೌತಮ್ ಗಂಭೀರ್ 2018ರ ಹರಾಜಿನಲ್ಲಿ ಡೆಲ್ಲಿ ಡೇರ್'ಡೇವಿಲ್ಸ್ ತಂಡದ ಪಾಲಾಗಿರುವ ಕಾರಣ ಕೆಕೆಆರ್ ತಂಡವನ್ನು  7.4 ಕೋಟಿಗೆ ಹರಾಜಾಗಿರುವ ದಿನೇಶ್ ಕಾರ್ತಿಕ್ ತಂಡದ ನಾಯಕನಾಗಿ ಮುನ್ನಡೆಸಲಿದ್ದಾರೆ.

ಇದೇ ತಂಡದಲ್ಲಿರುವ ಕನ್ನಡಿಗ ರಾಬಿನ್ ಉತ್ತಪ್ಪ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ದಿನೇಶ್ ಕಾರ್ತಿಕ್ ಕಳೆದೆರಡು ಆವೃತ್ತಿಗಳಿಂದ ಗುಜರಾತ್ ಲಯನ್ಸ್ ತಂಡದ ಪರ ಆಡಿದ್ದರು. ಕಾರ್ತಿಕ್ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ತಮಿಳುನಾಡು ರಣಜಿ ತಂಡದ ನಾಯಕರಾಗಿದ್ದರು. ಇವರ ಅವಧಿಯಲ್ಲಿ 2009-10 ತಂಡವು ವಿಜಯ್ ಹಜಾರೆ ಟ್ರೋಫಿ ಗೆದ್ದಿತ್ತು.

ಬಾಲಿವುಡ್ ನಟ ಶಾರೂಕ್ ಖಾನ್ ಮಾಲಿಕತ್ವದ ಕೆಕೆಆರ್ ತಂಡ ಐಪಿಎಲ್ ಟೂರ್ನಿಗಳಲ್ಲಿ 2012 ಹಾಗೂ 2014ರಲ್ಲಿ ಚಾಂಪಿಯನ್ ಆಗಿತ್ತು. ಯಶಸ್ವಿ ತಂಡದ ನಾಯಕನನ್ನಾಗಿ ಮಾಡಿರುವುದಕ್ಕೆ ನಾನು ಆಭಾರಿಯಾಗಿದ್ದು ನೂತನ ಆಟಗಾರರಿರುವ ತಂಡವನ್ನು ಮುನ್ನಡೆಸಲು ಇದು ನನಗೆ ಹೊಸ ಸವಾಲಾಗಿದೆ. ತಂಡವು ಅತ್ಯುತ್ತಮವಾಗಿ ಪ್ರದರ್ಶನ ತೋರಿಸಲು ನಾನು ಕೈಲಾದಷ್ಟು ಪ್ರಯತ್ನಿಸುತ್ತೇನೆ'ಎಂದು ತಿಳಿಸಿದ್ದಾರೆ.

 

click me!