ಫುಟ್ಬಾಲ್, ಬೇಸ್ ಬಾಲ್, ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿದ್ದ ಕಿಸ್ ಕ್ಯಾಮ್ ಇದೀಗ ಕ್ರಿಕೆಟ್ ಕ್ರೀಡಾಂಗಣಕ್ಕೂ ಎಂಟ್ರಿ ಕೊಟ್ಟಿದೆ. ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿನ ಕಿಸ್ ಕ್ಯಾಮ್ ಇದೀಗ ಭಾರಿ ವೈರಲ್ ಆಗುತ್ತಿದೆ. ಇಲ್ಲಿದೆ ಕಿಸ್ ಕ್ಯಾಮ್ ವೀಡಿಯೋ.
ಮೆಲ್ಬರ್ನ್(ಡಿ.28): ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೆಲ್ಬರ್ನ್ ಟೆಸ್ಟ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭಾರತ ತಂಡ ದಾಖಲೆ ಬರೆದಿದೆ. ಫುಟ್ಬಾಲ್ ಪಂದ್ಯದಲ್ಲಿದ್ದ ಕಿಸ್ ಕ್ಯಾಮ್ ಇದೀಗ ಮೆಲ್ಬರ್ನ್ ಟೆಸ್ಟ್ ಪಂದ್ಯದ ಮೂಲಕ ಕ್ರಿಕೆಟ್‌ಗೂ ಕಾಲಿಟ್ಟಿದೆ.
ಇದನ್ನೂ ಓದಿ: ಬುಮ್ರಾ & ಟೀಂ ಟಾಪ್ ಕ್ಲಾಸ್ ಬೌಲಿಂಗ್-ಆದ್ರೆ ಶ್ರೇಷ್ಠವಲ್ಲ: ವೆಂಕಟೇಶ್ ಪ್ರಸಾದ್
ಕಿಸ್ ಕ್ಯಾಮ್ ಯಾರನ್ನ ಫೋಕಸ್ ಮಾಡುತ್ತಾರೋ ಅವರು ಕಿಸ್ ನೀಡೋ ಮೂಲಕ ಈ ಅಭಿಯಾನ ಶುರುವಾಗುತ್ತೆ. ಇದು ಮೈದಾನದಲ್ಲಿ ಹಾಕಿರುವ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತೆ. ಫುಟ್ಬಾಲ್ ಕ್ರೀಡಾಂಗಣದಲ್ಲಿ ಪ್ರತಿ ಪಂದ್ಯದಲ್ಲೂ ಕಿಸ್ ಕ್ಯಾಮ್ ಇದ್ದೇ ಇರುತ್ತೆ. ಇದೀಗ ಕ್ರಿಕೆಟ್‌ನಲ್ಲೂ ರಾರಾಜಿಸುತ್ತಿದೆ.
Kiss cam 🤣🤣 pic.twitter.com/JytSxk6A77
— சுரேசு (@SoonaaPaanaa)
ಇದನ್ನೂ ಓದಿ: ಮೆಲ್ಬರ್ನ್‌ನಲ್ಲಿ ಬುಮ್ರಾ ಮ್ಯಾಜಿಕ್- 346 ರನ್ ಮುನ್ನಡೆಯಲ್ಲಿ ಕೊಹ್ಲಿ ಬಾಯ್ಸ್!
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಿಸ್ ಕ್ಯಾಮ್ ತೋರಿಸುತ್ತಿದ್ದಂತೆ ಹಲವು ಜೋಡಿಗಳು ಕಿಸ್ ನೀಡೋ ಮೂಲಕ ಸಂಭ್ರಮ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೀಡಿಯೋ ವೈರಲ್ ಆಗಿದೆ.