
ಚೆನ್ನೈ(ಏ.09): ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ದೊಡ್ಡ ಪಟ್ಟು ಬಿದ್ದಿದೆ. ಮಂಡಿಯ ಸ್ನಾಯುವಿನ ನೋವಿನಿಂದಾಗಿ ಪ್ರಮುಖ ಬ್ಯಾಟ್ಸ್'ಮೆನ್ ಕೇದಾರ್ ಜಾಧವ್ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 13ನೇ ಓವರ್'ನಲ್ಲಿ ಬ್ಯಾಟ್ ಮಾಡುವಾಗ ಗಾಯದ ಸಮಸ್ಯೆಯಿಂದ ನಿವೃತ್ತಿ ಹೊಂದಿದ್ದರು. ನಮ್ಮ ತಂಡಕ್ಕೆ ದೊಡ್ಡ ನಷ್ಟ. ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್'ಮೆನ್ ತಂಡದಿಂದ ಹೊರಗುಳಿಯುತ್ತಿರುವುದು ತುಂಬಲಾರದ ನಷ್ಟ ಎಂದು ಸಿಎಸ್'ಕೆ ಬ್ಯಾಟಿಂಗ್ ಕೋಚ್ ಮೈಖಲ್ ಹಸ್ಸಿ ಹೇಳಿದ್ದಾರೆ.
ಚೆನ್ನೈ ತಂಡ ನಾಳೆ (ಏ.10) ಕೋಲ್ಕತ್ತಾ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.