ವಿಶ್ವಕಪ್'ನಲ್ಲಿ ದೇಶದ ಕೀರ್ತಿಪತಾಕೆ ಹೆಚ್ಚಿಸಿದ ಕರ್ನಾಟಕದ ಆಟಗಾರ್ತಿಯರ ಬಗ್ಗೆ ಸರಕಾರದ ಅಸಡ್ಡೆತನ

By Suvarna Web DeskFirst Published Jul 26, 2017, 1:16 PM IST
Highlights

* ಭಾರತ ತಂಡ ಮಹಿಳಾ ವಿಶ್ವಕಪ್ ಫೈನಲ್ ಸಾಧನೆ

* ಬಿಸಿಸಿಐನಿಂದ ಆಟಗಾರ್ತಿಯರಿಗೆ ತಲಾ 50 ಲಕ್ಷ ರೂ. ಘೋಷಣೆ

* ಕೆಲ ರಾಜ್ಯಗಳು ಬಹುಮಾನ ಮೊತ್ತ, ಸರ್ಕಾರಿ ಹುದ್ದೆಯ ಭರವಸೆ

* ಕರ್ನಾಟಕದ ಇಬ್ಬರು ಆಟಗಾರ್ತಿಯರಿಗೆ ಸಿಕ್ಕಿಲ್ಲ ಬಹುಮಾನ

* ವಿಶ್ವಕಪ್'​ನಲ್ಲಿ ಆಡಿದ್ದ ಕರ್ನಾಟಕದ ವೇದ-ರಾಜೇಶ್ವರಿ

* ಇಬ್ಬರು ಕನ್ನಡಿಗರನ್ನ ಕಡೆಗಣಿಸಿದ ಕರ್ನಾಟಕ ಸರ್ಕಾರ

* ವೇದ ಕೃಷ್ಣಮೂರ್ತಿ-ರಾಜೇಶ್ವರಿ ಗಾಯಕ್ವಾಡ್​ಗೆ ಭಾರೀ ನಿರಾಸೆ

ಬೆಂಗಳೂರು(ಜುಲೈ 26): ಏಕದಿನ ವಿಶ್ವಕಪ್ ಫೈನಲ್ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಬಿಸಿಸಿಐ ತಲಾ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ಘೋಷಿಸಿತ್ತು. ಹಾಗೆ ಆಟಗಾರ್ತಿಯರನ್ನು ಪ್ರತನಿಧಿಸುವ ಕೆಲ ರಾಜ್ಯ ಸರ್ಕಾರಗಳೂ ಸಹ ಆಟಗಾರ್ತಿಯರಿಗೆ ಬಹುಮಾನ ಮೊತ್ತ ಮತ್ತು ಸರ್ಕಾರಿ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದವು. ಹರ್ಮನ್'​ಪ್ರೀತ್ ಕೌರ್​ಗೆ ಪಂಜಾಬ್ ಸರ್ಕಾರ ಮತ್ತು ಸುಷ್ಮಾ ವರ್ಮಾ ಹಿಮಾಚಲ ಪ್ರದೇಶ ಸರ್ಕಾರ ಸರ್ಕಾರಿ ಉದ್ಯೋಗದ ಭರವಸೆ ನೀಡಿದೆ. ಆದ್ರೆ ವರ್ಲ್ಡ್'​ಕಪ್​​ನಲ್ಲಿ ಆಡಿ ಮಿಂಚಿದ ಕರ್ನಾಟಕ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್​ ಅವರಿಗೆ ಕರ್ನಾಟಕ ಸರ್ಕಾರ ಯಾವುದೇ ಬಹುಮಾನ ಮೊತ್ತವಾಗಲಿ, ಉದ್ಯೋಗದ ಭರವಸೆಯಾಗಲಿ ನೀಡಿಲ್ಲ. ವಿಶ್ವ ಮಟ್ಟದಲ್ಲಿ ಭಾರತದ ಮತ್ತು ಕರ್ನಾಟಕದ ಕೀರ್ತಿ ಹೆಚ್ಚಿಸಿ ಮಹಿಳೆಯರನ್ನ ಕರ್ನಾಟಕ ಸರ್ಕಾರ ಕಡೆಗಣಿಸಿದೆ. ಈ ಬಗ್ಗೆ ಟೀಕೆಗಳು ಕೇಳಿ ಬರ್ತಿವೆ. ರಾಜ್ಯ ಸರ್ಕಾರ ಮುಂದಿನ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವುದರಲ್ಲಿ ನಿರತವಾಗಿದೆಯೇ ಹೊರತು ಸಾಧಕರನ್ನ ಗುರುತಿಸುವಲ್ಲಿ ವಿಫಲವಾಗಿದೆ ಎಂದು ಕ್ರೀಡಾ ವಲಯದಲ್ಲಿ ಭಾರೀ ಟೀಕೆಗಳು ಕೇಳಿ ಬರ್ತಿವೆ.

click me!