
ಲಾಸ್ ಏಂಜಲೀಸ್(ಜು.25): ಒಲಿಂಪಿಕ್ಸ್ ಸಾರ್ವಕಾಲಿಕ ಶ್ರೇಷ್ಠ ಈಜುಗಾರ ಮೈಕಲ್ ಫೆಲ್ಪ್ಸ್ ಶಾರ್ಕ್ ಮೀನಿನೊಂದಿಗೆ ಸ್ಪರ್ಧಿಸಿದ್ದಾರೆ ಎನ್ನುವ ಸುದ್ದಿ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಶಾರ್ಕ್‌ನೊಂದಿಗೆ ಫೆಲ್ಪ್ಸ್ ಸ್ಪರ್ಧಿಸಿರುವುದು ನಿಜ. ಆದರೆ ಶಾರ್ಕ್‌ನೊಂದಿಗೆ ಅವರು ಒಟ್ಟಿಗೆ ಸ್ಪರ್ಧೆ ನಡೆಸಿಲ್ಲ. ದಕ್ಷಿಣ ಆಫ್ರಿಕಾ ಶಾರ್ಕ್ ವೀಕ್ ಸೀರಿಸ್ ಎನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫೆಲ್ಪ್ಸ್, ದೈತ್ಯಾಕಾರದ ಮೀನಿನೊಂದಿಗೆ ಈಜುವುದಿಲ್ಲ. ತಾವು ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದ್ದರು. ಈ ಕಾರಣದಿಂದಾಗಿ, ಆಯೋಜಕರು ಮೊದಲು ಶಾರ್ಕ್ ಮೀನು ನಿಗದಿತ ದೂರವನ್ನು ಎಷ್ಟು ಸೆಕೆಂಡ್‌ಗಳಲ್ಲಿ ಕ್ರಮಿಸುತ್ತದೆ ಎನ್ನುವುದನ್ನು ದಾಖಲಿಸಿಕೊಂಡು ನಂತರ ಅಷ್ಟೇ ದೂರವನ್ನು ಫೆಲ್ಪ್ಸ್ ಈಜಿದರು. ಶಾರ್ಕ್‌ಗಿಂತ ಫೆಲ್ಪ್ಸ್ 2 ಸೆಕೆಂಡ್ ಹೆಚ್ಚಿಗೆ ತೆಗೆದುಕೊಂಡರು ಎಂದು ಆಯೋಜಕರು ತಿಳಿಸಿದ್ದಾರೆ.
ಆದರೆ ಈ ಸ್ಪರ್ಧೆಯನ್ನು ಪ್ರಸಾರ ಮಾಡುವಾಗ ‘ಡಿಸ್ಕವರಿ’ ವಾಹಿಸಿ, ಪ್ರೇಕ್ಷಕರನ್ನು ಸೆಳೆಯುವ ಹಾಗೂ ಸ್ಪರ್ಧೆಯ ತೀವ್ರತೆಯನ್ನು ಅರ್ಥ ಮಾಡಿಸುವ ದೃಷ್ಟಿಯಿಂದ ಶಾರ್ಕ್ ಹಾಗೂ ಫೆಲ್ಪ್ಸ್ ಒಟ್ಟಿಗೆ ಈಜುವಂತೆ ತೋರಿಸಿದೆ.
ಹೀಗಿತ್ತು ಮೈ ಜುಮ್ಮೆನಿಸುವ ಆ ಕ್ಷಣ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.