ಕರ್ನಾಟಕ ಬೃಹತ್ ಮೊತ್ತ; ಮಯಂಕ್ ಜೊತೆಗೆ ಬಿನ್ನಿ ಶತಕ; ಶ್ರೇಯಸ್ ಶತಕ ಜಸ್ಟ್ ಮಿಸ್

By Suvarna Web DeskFirst Published Nov 10, 2017, 5:12 PM IST
Highlights

* ನೆಲಮಂಗಲದ ಆಲೂರಿನಲ್ಲಿ ನಡೆಯುತ್ತಿರುವ ಕರ್ನಾಟಕ-ದೆಹಲಿ ರಣಜಿ ಪಂದ್ಯ

* ಸತತ ನಾಲ್ಕನೇ ಜಯದ ಮೇಲೆ ಕರ್ನಾಟಕದ ಕಣ್ಣು

* ಕರ್ನಾಟಕ ಮೊದಲ ಇನ್ನಿಂಗ್ಸ್ 649 ರನ್'ಗೆ ಆಲೌಟ್

* ಸ್ಟುವರ್ಟ್ ಬಿನ್ನಿ ಭರ್ಜರಿ ಶತಕ; ಶ್ರೇಯಸ್ ಗೋಪಾಲ್ 92 ರನ್

ಬೆಂಗಳೂರು(ನ. 10): ಈ ಬಾರಿಯ ರಣಜಿ ಟ್ರೋಫಿಯಲ್ಲಿ ಸತತ ನಾಲ್ಕನೇ ಗೆಲುವಿಗೆ ಕಣ್ಣುಹಾಕಿರುವ ಕರ್ನಾಟಕ ತಂಡ ದೆಹಲಿ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ. ನೆಲಮಂಗಲ ಸಮೀಪದ ಆಲೂರಿನ ನೂತನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ತಂಡ ತನ್ನ ಮೊದಲ ಇನ್ನಿಂಗ್ಸ್'ನಲ್ಲಿ 649 ರನ್ ಗಳಿಸಿದೆ. ಇದಕ್ಕೆ ಪ್ರತಿಯಾಗಿ ದೆಹಲಿ ತನ್ನ ಮೊದಲ ಇನಿಂಗ್ಸಲ್ಲಿ ವಿಕೆಟ್ ನಷ್ಟವಿಲ್ಲದೆ 20 ರನ್ ಗಳಿಸಿ ಎರಡನೇ ದಿನಾಂತ್ಯಗೊಳಿಸಿದೆ.

ನಿನ್ನೆ ಮೊದಲ ದಿನಾಂತ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿದ್ದ ಕರ್ನಾಟಕ ಇಂದು ಎರಡನೇ ದಿನದ ಆರಂಭದಲ್ಲೇ ಆಘಾತ ಅನುಭವಿಸಿತ್ತು. ನಿನ್ನೆ 169 ರನ್ ಗಳಿಸಿ ಅಜೇಯರಾಗಿದ್ದ ಮಯಂಕ್ ಅಗರ್ವಾಲ್ ಇಂದು 7 ರನ್ ಸೇರಿಸಿ ಔಟಾದರು. ಕಳೆದ ಪಂದ್ಯದಲ್ಲಿ ತ್ರಿಶತಕ ಭಾರಿಸಿದ್ದ ಮಯಂಕ್ ಅವರು ಈ ಪಂದ್ಯದಲ್ಲಿ ದ್ವಿಶತಕದ ಗಡಿದಾಟುವ ಪ್ರಯತ್ನ ರನ್ನೌಟ್ ಮೂಲಕ ವಿಫಲವಾಯಿತು. ಆ ಬಳಿಕ ಸಿಎಂ ಗೌತಮ್, ಶ್ರೇಯಸ್ ಗೋಪಾಲ್ ಮತ್ತು ಅಭಿಮನ್ಯು ಮಿಥುನ್ ಉತ್ತಮವಾಗಿ ಬ್ಯಾಟ್ ಮಾಡಿ ತಂಡದ ಸ್ಕೋರನ್ನು 649 ರನ್'ಗೆ ಕೊಂಡೊಯ್ದರು. ಸ್ಟುವರ್ಟ್ ಬಿನ್ನಿ ಭರ್ಜರಿಯಾಗಿ ತಮ್ಮ 10ನೇ ಫಸ್ಟ್ ಕ್ಲಾಸ್ ಸೆಂಚುರಿ ಭಾರಿಸಿದರು. ಆಲ್'ರೌಂಡರ್ ಬಿನ್ನಿ 155 ಎಸೆತದಲ್ಲಿ 118 ರನ್ ಚಚ್ಚಿದರು. ಶ್ರೇಯಸ್ ಗೋಪಾಲ್ ಕೇವಲ 8 ರನ್ನಿಂದ ಶತಕವಂಚಿತರಾದರು. ಬೃಹತ್ ಮೊತ್ತ ಪೇರಿಸಿರುವ ಕರ್ನಾಟಕ ಸದ್ಯಕ್ಕೆ ಪಂದ್ಯದ ಮೇಲೆ ಪೂರ್ಣ ಹಿಡಿತ ಹೊಂದಿದೆ. ಉನ್ಮುಕ್ತ್ ಚಾಂದ್, ಗೌತಮ್ ಗಂಭೀರ್, ರಿಶಭ್ ಪಂತ್, ನಿತೀಶ್ ರಾಣಾ ಮೊದಲಾದ ಪ್ರಬಲ ಬ್ಯಾಟುಗಾರರನ್ನು ಹೊಂದಿರುವ ದೆಹಲಿ ಪಡೆ ಆತಿಥೇಯರ ಬೃಹತ್ ಮೊತ್ತವನ್ನು ದಾಟಿ ಮುನ್ನಡೆ ಪಡೆಯುತ್ತದೆಯೇ ಎಂದು ಕಾದುನೋಡಬೇಕು.

ಸ್ಕೋರು ವಿವರ(2ನೇ ದಿನದಾಟ):

ಕರ್ನಾಟಕ ಮೊದಲ ಇನ್ನಿಂಗ್ಸ್ 172.2 ಓವರ್ 649 ರನ್ ಆಲೌಟ್
(ಮಯಂಕ್ ಅಗರ್ವಾಲ್ 176, ಸ್ಟುವರ್ಟ್ ಬಿನ್ನಿ 118, ಶ್ರೇಯಸ್ ಗೋಪಾಲ್ 92, ಮನೀಶ್ ಪಾಂಡೆ 74, ರವಿಕುಮಾರ್ ಸಮರ್ಥ್ 58 ಸಿ.ಎಂ.ಗೌತಮ್ 46, ಅಭಿಮನ್ಯು ಮಿಥುನ್ ಅಜೇಯ 35 ರನ್ - ಮನನ್ ಶರ್ಮಾ 131/3, ವಿಕಾಸ್ ಮಿಶ್ರಾ 152/3)

ದೆಹಲಿ ಮೊದಲ ಇನ್ನಿಂಗ್ಸ್ 5 ಓವರ್ 20/0
(ಗೌತಮ್ ಗಂಭೀರ್ ಅಜೇಯ 12, ಉನ್ಮುಕ್ತ್ ಚಾಂದ್ ಅಜೇಯ 8 ರನ್)

click me!