ಕೊನೆ ಟಿ20 ಪಂದ್ಯಕ್ಕೂ ಮುನ್ನ ಆದ ಯಡವಟ್ಟು ನಿಮಗೇನಾದ್ರೂ ಗೊತ್ತಾಯ್ತಾ..?

By Suvarna Web DeskFirst Published Nov 10, 2017, 3:28 PM IST
Highlights

ಮಳೆಯಿಂದಾದ ಅಡಚಣೆಯಿಂದಾಗಿ ಪಂದ್ಯ ನಡೆಯುವುದು ಅನುಮಾನವೆನಿಸಿತ್ತು. ಆದರೆ, ಮೈದಾನದ ಗ್ರೌಂಡ್'ಮೆನ್ಸ್'ಗಳು ಚುರುಕಿನ ಕೆಲಸ ಮಾಡಿದ್ದರಿಂದ ಪಂದ್ಯ ನಡೆಯಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ತಿರುವನಂತಪುರಂ(ನ.10): ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಗಳನ್ನು ಹಾಡುವುದು ಮರೆತೆವು. ಇದಕ್ಕಾಗಿ ಕ್ಷಮೆ ಕೇಳುತ್ತೇವೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಹೇಳಿದೆ.

ಮಳೆಯಿಂದಾಗಿ ಪಂದ್ಯ ಆರಂಭಗೊಳ್ಳುವುದು ತಡವಾಯಿತು. ‘ಎಷ್ಟು ಸಾಧ್ಯವೋ ಅಷ್ಟು ಬೇಗ ಪಂದ್ಯವನ್ನು ಆರಂಭಿಸುವ ಭರದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌'ನ ರಾಷ್ಟ್ರಗೀತೆಯನ್ನು ಮರೆತು ಬಿಟ್ಟೆವು’ ಎಂದು ಕೆಸಿಎ ಕಾರ್ಯದರ್ಶಿ ಜಯೇಶ್ ಜಾರ್ಜ್ ಹೇಳಿದ್ದಾರೆ.

ಆಟಗಾರರಾಗಲೀ, ಮ್ಯಾಚ್ ಅಧಿಕಾರಿಗಳಾಗಲಿ ನಮಗೆ ಇದನ್ನು ನೆನಪಿಸಿಲ್ಲ. ಇದೊಂದು ಗಂಭೀರ ಪ್ರಮಾಧವಾಗಿದ್ದು, ಈ ಬಗ್ಗೆ ದೇಶದ ಕ್ಷಮೆ ಕೋರುವುದಾಗಿ ಜಯೇಶ್ ಹೇಳಿದ್ದಾರೆ. ಇದೇ ವೇಳೆ ಶ್ರೀಶಾಂತ್‌'ಗೆ ಕೇರಳ ಕ್ರಿಕೆಟ್ ಸಂಸ್ಥೆ ಆಹ್ವಾನ ನೀಡಿತ್ತು. ಆದರೆ ಅವರು ಆಗಮಿಸಲಿಲ್ಲ ಎಂದು ಜಾರ್ಜ್ ಹೇಳಿದ್ದಾರೆ.

ಮಳೆಯಿಂದಾದ ಅಡಚಣೆಯಿಂದಾಗಿ ಪಂದ್ಯ ನಡೆಯುವುದು ಅನುಮಾನವೆನಿಸಿತ್ತು. ಆದರೆ, ಮೈದಾನದ ಗ್ರೌಂಡ್'ಮೆನ್ಸ್'ಗಳು ಚುರುಕಿನ ಕೆಲಸ ಮಾಡಿದ್ದರಿಂದ ಪಂದ್ಯ ನಡೆಯಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

click me!