ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕದ ಸಂಭಾವ್ಯ ತಂಡ ಪ್ರಕಟ

Published : Sep 12, 2019, 01:32 PM IST
ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕದ ಸಂಭಾವ್ಯ ತಂಡ ಪ್ರಕಟ

ಸಾರಾಂಶ

ಸೆಪ್ಟೆಂಬರ್ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಗೆ 25 ಆಟಗಾರರನ್ನೊಳಗೊಂಡ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

ಬೆಂಗಳೂರು(ಸೆ.12): ಸೆ. 24 ರಿಂದ ಅ. 25ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ಕರ್ನಾಟಕದ 25 ಸಂಭವನೀಯ ಆಟಗಾರರ ಪಟ್ಟಿಯನ್ನು ಕೆಎಸ್‌ಸಿಎ ಬುಧವಾರ ಪ್ರಕಟಿಸಿದೆ. 

ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ಸಂಭಾವ್ಯ ತಂಡ ಪ್ರಕಟ; ಕೊಹ್ಲಿಗೆ ಸ್ಥಾನ!

ಕೆಪಿಎಲ್ ಸೇರಿದಂತೆ ದೇಸಿ ಕ್ರಿಕೆಟ್ ಲೀಗ್ ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಯುವ ಆಟಗಾರರನ್ನು ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಲಾಗಿದೆ. ವೈಶಾಕ್ ವಿಜಯ್ ಕುಮಾರ್, ಮನೋಜ್ ಬಂಡಗೆ ಸೇರಿದಂತೆ ಇತರ ಆಟಗಾರರು ಸ್ಥಾನ ಪಡೆದಿದ್ದಾರೆ. ಉಳಿದಂತೆ ಹಿರಿಯ ಆಟಗಾರರು ಉಳಿದುಕೊಂಡಿದ್ದಾರೆ.

ಸಂಭಾವ್ಯ ತಂಡ: ಮನೀಶ್ ಪಾಂಡೆ, ರಾಹುಲ್, ಮಯಾಂಕ್, ಕರುಣ್, ದೇವದತ್, ಪವನ್, ಅಭಿಷೇಕ್, ಸಿದ್ಧಾರ್ಥ್, ಕೆ. ಗೌತಮ್, ಶ್ರೇಯಸ್, ಸುಚಿತ್, ಪ್ರವೀಣ್ ದುಬೆ, ಶರತ್ ಬಿ.ಆರ್. ಶರತ್ ಶ್ರೀನಿವಾಸ್, ನಿಹಾಲ್ ಉಳ್ಳಾಲ್, ಮಿಥುನ್, ಪ್ರಸಿದ್ಧ್, ರೋನಿತ್, ಕೌಶಿಕ್, ಪ್ರತೀಕ್, ಮನೋಜ್, ಶುಭಾಂಗ್, ರೋಹನ್ ಕದಂ, ಸಮರ್ಥ್, ವೈಶಾಕ್.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್