ಪ್ರತಿ ಗ್ರಾಮ ಪಂಚಾಯಿತ್‌ನಲ್ಲಿ 5 ಕೋಟಿ ರುಪಾಯಿ ವೆಚ್ಚದ ಸುಸಜ್ಜಿತ ಸ್ಟೇಡಿಯಂ..! ಬೊಮ್ಮಾಯಿ ಬಂಪರ್ ಬಜೆಟ್

By Naveen Kodase  |  First Published Feb 17, 2023, 5:54 PM IST

2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕ್ರೀಡಾಕ್ಷೇತ್ರಕ್ಕೆ ಬಂಪರ್ ಅನುದಾನ ಘೋಷಿಸಿದ ಕರ್ನಾಟಕ ಸಿಎಂ
ನರೇಗಾ ಯೋಜನೆಯಡಿ ಪ್ರತಿ ಗ್ರಾಮಪಂಚಾಯತ್‌ನಲ್ಲಿ 5 ಕೋಟಿ ವೆಚ್ಚದ ಕ್ರೀಡಾ ಅಂಕಣ ನಿರ್ಮಾಣ


ಬೆಂಗಳೂರು(ಫೆ.17): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು 2023-24ನೇ ಸಾಲಿನ ಮುಂಗಡ ಪತ್ರವನ್ನು ವಿಧಾನಸೌಧದಲ್ಲಿ ಮುಂಡಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರು ಈ ಬಾರಿ ದಾಖಲೆಯ 3,09,182 ಕೋಟಿ ರುಪಾಯಿ ಮೊತ್ತದ ಬೃಹತ್ ಬಜೆಟ್ ಮಂಡಿಸಿದ್ದು, ಹಲವು ವಲಯಗಳಿಗೆ ಬಂಪರ್ ಅನುದಾನ ಘೋಷಿಸಿದ್ದಾರೆ. ಅದೇ ರೀತಿ ಕ್ರೀಡಾ ಕ್ಷೇತ್ರಕ್ಕೂ ಎಲ್ಲರೂ ಹುಬ್ಬೇರಿಸುವಂತೆ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.  

ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಬಜೆಟ್‌ನಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಗಮನ ಸೆಳೆದ ವಿಚಾರವೆಂದರೆ, ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಕ್ರೀಡಾ ಅಂಕಣವನ್ನು ನಿರ್ಮಿಸಲು ನರೇಗಾ ಯೋಜನೆಯಡಿ 5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ. 

Latest Videos

undefined

2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಿಕ್ಕಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ:

* ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳಾದ ಖೋ-ಖೋ, ಕುಸ್ತಿ, ಕಬಡ್ಡಿ, ಕಂಬಳ, ಎತ್ತಿನಗಾಡಿ ಓಟ, ಮುಂತಾದವುಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಲು ಮತ್ತು ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತವಾದ ಕ್ರೀಡಾ ಅಂಕಣವನ್ನು ನರೇಗಾ ಯೋಜನೆಯಡಿ 5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ.

* ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಅಧಿಕೃತವಾಗಿ ನೋಂದಣಿಯಾಗಿರುವ ಖಾಸಗಿ ಕ್ರೀಡಾಸಂಸ್ಥೆಗಳಿಗೆ 25 ಲಕ್ಷ ರುಪಾಯಿಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುವುದು.

Karnataka Budget 2023-24: ಬೆಂಗಳೂರಿಗೆ 9,698 ಕೋಟಿ ರೂ. ಬಂಪರ್- 110 ಹಳ್ಳಿಗಳಿಗೆ ಕಾವೇರಿ ನೀರು ಲಭ್ಯ

* ಬಾಸ್ಕೆಟ್‌ಬಾಲ್‌ ಮತ್ತು ವಾಲಿಬಾಲ್‌ ಕ್ರೀಡೆಗಳನ್ನು ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಪರಿಚಯಿಸಲು ಹೊಸ ಅಂಕಣಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗುವುದು.

* ರಾಜ್ಯದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಐದು ಯುವ ಜನರಿಗೆ ಪ್ರಸಕ್ತ ಸಾಲಿನಿಂದ ಸ್ವಾಮಿ ವಿವೇಕನಂದ ಯುವ ಪ್ರಶಸ್ತಿ ನೀಡಲಾಗುವುದು.

* ಒಲಿಂಪಿಕ್ಸ್‌ ಮತ್ತು ಇತರ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆಯುವ ಉದ್ದೇಶಕ್ಕೆ ಅತ್ಯುನ್ನತ ತರಬೇತಿ ಹಾಗೂ ಸಲಕರಣೆಗಳನ್ನು ಪಡೆಯಲು ಅನುವಾಗುವಂತೆ 50 ಕೋಟಿ ರುಪಾಯಿ ವೆಚ್ಚದಲ್ಲಿ ಕರ್ನಾಟಕ ಒಲಿಂಪಿಕ್ ಕನಸಿನ ಯೋಜನಾ ನಿಧಿ(Karnataka Olympic Dreem Project Fund) ಸ್ಥಾಪಿಸಲಾಗುವುದು. ಈ ಯೋಜನೆಯಡಿ 12ರಿಂದ 19 ವರ್ಷ ವಯೋಮಾನದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಯುವ ಪ್ರತಿಭಾವಂತ ಕ್ರೀಡಾಪಟುಗಳ ಪ್ರಾಯೋಜನೆ ಮಾಡಲಾಗುವುದು. 

* ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ, ಮಂಡ್ಯ ಮತ್ತು ಉಡುಪಿ ಜಿಲ್ಲಾ ಕ್ರೀಡಾಂಗಣಗಳಲ್ಲಿ ಸುಸಜ್ಜಿತ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

* ಮುಂದಿನ ವರ್ಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕ್ರೀಡಾಂಗಣಗಳ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು. ಈ ಕ್ರೀಡಾಂಗಣಗಳಲ್ಲಿ ಮಹಿಳೆಯರು ಮತ್ತು ವಿಶೇಷಚೇತನರಿಗೆ ಸೂಕ್ತ ಸೌಕರ್ಯಗಳು ಹಾಗೂ ಯುವ ಜನರಿಗೆ ಹೊರಾಂಗಣ ಜಿಮ್ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 100 ಕೋಟಿ ರುಪಾಯಿ ಅನುದಾನ ಮೀಸಲಿಡಲಾಗಿದೆ.
 

click me!