ವಿಶ್ವಕಪ್ ಕಬಡ್ಡಿ: ಆಸ್ಟ್ರೇಲಿಯಾ ಸೋಲಿಸಿದ ಭಾರತೀಯರು

By internet deskFirst Published Oct 9, 2016, 4:55 AM IST
Highlights

ಫಸ್ಟ್ ಮ್ಯಾಚ್​​ನಲ್ಲಿ ಸೌತ್ ಕೊರಿಯಾ ವಿರುದ್ಧ ವಿರೋಚಿತವಾಗಿದ್ದ ಸೋತಿದ್ದ ಟೀಮ್ ಇಂಡಿಯಾ, ಆಸೀಸ್​ ವಿರುದ್ಧ ಭರ್ಜರಿ ಜಯ ಸಾಧಿಸ್ತು. 

ಅಹಮದಬಾದ್(ಅ.09): ವರ್ಲ್ಡ್​ಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತೀಯರು, ಕಾಂಗರೂ ಬೇಟೆಯಾಡಿದ್ದಾರೆ. ಫಸ್ಟ್ ಮ್ಯಾಚ್​​ನಲ್ಲಿ ಸೌತ್ ಕೊರಿಯಾ ವಿರುದ್ಧ ವಿರೋಚಿತವಾಗಿದ್ದ ಸೋತಿದ್ದ ಟೀಮ್ ಇಂಡಿಯಾ, ಆಸೀಸ್​ ವಿರುದ್ಧ ಭರ್ಜರಿ ಜಯ ಸಾಧಿಸ್ತು. 

ಕೊರಿಯಾ ವಿರುದ್ಧ ವಿರೋಚಿತ ಸೋಲು ಕಂಡಿದ್ದ ಭಾರತೀಯರು, ಆಸ್ಟ್ರೇಲಿಯಾ ವಿರುದ್ಧ ಜಯದ ಖಾತೆ ತೆರೆದಿದ್ದಾರೆ. ಕಾಂಗರೂಗಳ ಪಂದ್ಯದಲ್ಲಿ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಟೀಮ್ ಇಂಡಿಯಾ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಯ್ತು. 

Latest Videos

11ನೇ ನಿಮಿಷದಲ್ಲಿ ಕಾಂಗರೂಗಳನ್ನ ಆಲೌಟ್​ ಮಾಡಿದ ಭಾರತ 20-2 ಅಂಕಗಳಿಂದ ಭಾರೀ ಮುನ್ನಡೆ ಪಡೆದುಕೊಂಡಿತ್ತು, ಕಬಡ್ಡಿ ಕೂಸು ಕಾಂಗರೂಗಳು ಬಲಿಷ್ಠ ಭಾರತೀಯರ ಮುಂದೆ ಹಸುಗೂಸಾಗಿ ಕಾಣುತ್ತಿತ್ತು.

ಭಾರತ ರೈಡಿಂಗ್ ಮತ್ತು ಅಟ್ಯಾಕಿಂಗ್ ಅದ್ಭುತವಾಗಿತ್ತು. ಮೊದಲಾರ್ಧದಲ್ಲಿ ಟೀಮ್ ಇಂಡಿಯಾ 32-7 ಅಂಕಗಳಿಂದ ಭಾರೀ ಮುನ್ನಡೆ ಪಡೆದುಕೊಂಡಿತ್ತು, ಉತ್ತರಾರ್ಧದ ಆರಂಭದಲ್ಲೇ ಆಸ್ಟ್ರೇಲಿಯಾ ಆಲೌಟ್ ಆಯ್ತು.

ಮೊದಲ ವರ್ಲ್ಡ್​ಕಪ್ ಆಡುತ್ತಿರುವ ಆಸೀಸ್​​, ಭಯದಿಂದಲೇ ಇಡೀ ಪಂದ್ಯವಾಡಿತು. ಕೋಚ್ ಪದೇಪದೇ ಆಟಗಾರರ ಆತ್ಮವಿಶ್ವಾಸ ತುಂಬುತ್ತಿದ್ದರು. ಪಂದ್ಯ ಸಾಗಿದಂತೆ ಭಾರತೀಯರ ಪಾಯಿಂಟ್ ಏರುತ್ತಾ ಹೋದ್ವು. 3ನೇ ಸಲ ಆಸೀಸ್ ಆಲೌಟ್ ಆಯ್ತು. ಭಾರತ 49-15ರಿಂದ ಮುನ್ನಡೆ ಕಾಯ್ದುಕೊಂಡಿತು. 

ಕೊನೆಗೆ ಭಾರತ 53-20 ಅಂಕಗಳಿಂದ ಪಂದ್ಯ ಗೆದ್ದುಕೊಳ್ತು. ಈ ಮೂಲಕ ಕೊರಿಯಾ ವಿರುದ್ಧ ಸೋಲಿನ ಕಹಿಯನ್ನ ಭಾರತೀಯರು ಮರೆತರು, 

click me!