‘ಎ‘ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಪಾಕಿಸ್ತಾನ ಮತ್ತು ಕೀನ್ಯಾ ತಂಡಗಳ ವಿರುದ್ಧ ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಸೆಮಿಫೈನಲ್‌ನಲ್ಲಿ ದೈತ್ಯ ಕೊರಿಯಾ ತಂಡವನ್ನು ಮಣಿಸಿ, ಫೈನಲ್ ಕದ ತಟ್ಟುವ ಹುಮ್ಮಸ್ಸಿನಲ್ಲಿ ಅಜಯ್ ಠಾಕೂರ್ ನೇತೃತ್ವದ ಪಡೆಯಿದೆ.
ದುಬೈ(ಜೂ.29]: ಹಾಲಿ ವಿಶ್ವ ಚಾಂಪಿಯನ್ ಭಾರತ ಕಬಡ್ಡಿ ತಂಡ ದುಬೈ ಮಾಸ್ಟರ್ಸ್ ಅನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಇಂದು ಇಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡ ‘ಬಿ’ ಗುಂಪಿನ ಅಗ್ರಸ್ಥಾನದಲ್ಲಿರುವ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ ಕಾದಾಟದಲ್ಲಿ ಪಾಕಿಸ್ತಾನ- ಇರಾನ್ ಸೆಣಸಾಟ ನಡೆಸಲಿವೆ.
‘ಎ‘ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಪಾಕಿಸ್ತಾನ ಮತ್ತು ಕೀನ್ಯಾ ತಂಡಗಳ ವಿರುದ್ಧ ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಸೆಮಿಫೈನಲ್‌ನಲ್ಲಿ ದೈತ್ಯ ಕೊರಿಯಾ ತಂಡವನ್ನು ಮಣಿಸಿ, ಫೈನಲ್ ಕದ ತಟ್ಟುವ ಹುಮ್ಮಸ್ಸಿನಲ್ಲಿ ಅಜಯ್ ಠಾಕೂರ್ ನೇತೃತ್ವದ ಪಡೆಯಿದೆ.
ಭಾರತ ತಂಡ ಸಮತೋಲನದಿಂದ ಕೂಡಿದ್ದು, ಟಾಪ್ ರೈಡರ್’ಗಳೂ ಸೇರಿದಂತೆ, ಬಲಿಷ್ಠ ಡಿಫೆಂಡರ್’ಗಳಾದ ಸುರೇಂದರ್ ನಾಡಾ, ಗಿರೀಶ್ ಮಾರುತಿ ಹಾಗೂ ಸುರ್ಜಿತ್ ಮತ್ತೊಮ್ಮೆ ಕೋರಿಯಾಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿದ್ದಾರೆ. ಇದುವರೆಗೂ ಭಾರತ ಮತ್ತು ದ.ಕೊರಿಯಾ 5 ಬಾರಿ ಮುಖಾಮುಖಿಯಾಗಿದ್ದು, ಭಾರತ 4 ಬಾರಿ ಜಯ ಸಾಧಿಸಿದೆ.