ಹಾಕಿ ಚಾಂಪಿಯನ್ಸ್ ಟ್ರೋಫಿ: ಭಾರತ-ಬೆಲ್ಜಿಯಂ ಪಂದ್ಯ ಡ್ರಾ

 |  First Published Jun 29, 2018, 10:54 AM IST

ಇಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತ, ಬೆಲ್ಜಿಯಂ ಎದುರು 1-1 ಗೋಲಿನಿಂದ ಡ್ರಾ ಸಾಧಿಸಿತು. ರೌಂಡ್ ರಾಬಿನ್ ಸುತ್ತಿನ ಬಳಿಕ ಪಟ್ಟಿಯಲ್ಲಿ ಮೊದಲ 2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ.


ಬ್ರೆಡಾ(ಜೂ.29]: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗುರುವಾರ ನಡೆದ ಭಾರತ, ಬೆಲ್ಜಿಯಂ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. 59ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಬೆಲ್ಜಿಯಂ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಸದ್ಯ ಭಾರತ 7 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಶನಿವಾರ ನಡೆಯಲಿರುವ ನೆದರ್‌ಲೆಂಡ್ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಫೈನಲ್‌ಗೇರುವ ಅವಕಾಶ ದೊರೆಯಲಿದೆ.

ಇಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತ, ಬೆಲ್ಜಿಯಂ ಎದುರು 1-1 ಗೋಲಿನಿಂದ ಡ್ರಾ ಸಾಧಿಸಿತು. ರೌಂಡ್ ರಾಬಿನ್ ಸುತ್ತಿನ ಬಳಿಕ ಪಟ್ಟಿಯಲ್ಲಿ ಮೊದಲ 2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ. ನೆದರ್‌ಲೆಂಡ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ 10 ಅಂಕಗಳಿಂದ ಅಗ್ರಸ್ಥಾನ ಪಡೆದಿದ್ದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

Tap to resize

Latest Videos

ಪಂದ್ಯದ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಭಾರತ ತಂಡ ಮೊದಲ ಕ್ವಾರ್ಟರ್‌ನ 10ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಪೆನಾಲ್ಟಿಯಲ್ಲಿ ಗೋಲುಗಳಿಸಿದರು. ಈ ಗೋಲಿನೊಂದಿಗೆ ಭಾರತ ಖಾತೆ ತೆರೆಯಿತು. ಮೊದಲ ಮತ್ತು 2ನೇ ಕ್ವಾರ್ಟರ್ ನಲ್ಲಿ ಇದೇ ಅಂತರವನ್ನು ಭಾರತ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

3ನೇ ಕ್ವಾರ್ಟರ್‌ನ 35ನೇ ನಿಮಿಷದಲ್ಲಿ, 4ನೇ ಕ್ವಾರ್ಟರ್‌ನ 55ನೇ ನಿಮಿಷದಲ್ಲಿ ಬೆಲ್ಜಿಯಂ ಗೋಲುಗಳಿಸುವ ಅವಕಾಶವನ್ನು ಭಾರತದ ಗೋಲ್ ಕೀಪರ್ ಶ್ರೀಜೇಶ್ ವಿಫಲಗೊಳಿಸಿದರು. ಇದರಿಂದಾಗಿ ಬೆಲ್ಜಿಯಂ ಹೆಚ್ಚಿನ ಒತ್ತಡಕ್ಕೆ ಒಳಗಾಯಿತು. 59ನೇ ನಿಮಿಷದಲ್ಲಿ ದೊರೆತ ಮತ್ತೊಂದು ಅವಕಾಶದಲ್ಲಿ ಬೆಲ್ಜಿಯಂನ ಆಟಗಾರ ಯಾವುದೇ ತಪ್ಪು ಮಾಡಲಿಲ್ಲ. ಶ್ರೀಜೇಶ್‌ರನ್ನು ವಂಚಿಸಿ ಗೋಲುಗಳಿಸಿದರು. ಈ ಗೋಲು ಪಂದ್ಯದ ಫಲಿತಾಂಶದ ದಿಕ್ಕನ್ನೆ ಬದಲಿಸಿತು. 

click me!