ಕಬಡ್ಡಿ ಮಾಸ್ಟರ್ಸ್: ಕೀನ್ಯಾ ವಿರುದ್ಧ 2ನೇ ಬಾರಿ ಭಾರತಕ್ಕೆ ಭರ್ಜರಿ ಗೆಲುವು

First Published Jun 26, 2018, 10:21 PM IST
Highlights

ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಕೀನ್ಯಾ ವಿರುದ್ಧದ 2ನೇ ಮುಖಾಮುಖಿಯಲ್ಲಿ ಭಾರತದ ಪ್ರದರ್ಶನ ಹೇಗಿತ್ತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

ದುಬೈ(ಜೂ.26): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಕೀನ್ಯಾ ತಂಡವನ್ನ 46-14 ಅಂಕಗಳ ಅಂತರದಲ್ಲಿ ಮಣಿಸಿದ್ದ ಭಾರತ ಇದೀಗ 2ನೇ ಮುಖಾಮುಖಿಯಲ್ಲಿ 50- 15 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಗ್ರೂಪ್ ಸ್ಟೇಜ್‌ನ ಅಂತಿಮ ಪಂದ್ಯದಲ್ಲಿ ಭಾರತ ಅರ್ಧಶತಕದ ಸಾಧನೆ ಮಾಡಿದೆ.

ಮೊದಲಾರ್ಧ ಆರಂಭಗೊಂಡ ಐದೇ ನಿಮಿಷಕ್ಕೆ ಭಾರತ 12 ಅಂಕ ಬಾಚಿಕೊಂಡಿತು. ಹೀಗಾಗಿ ಆರಂಭದಲ್ಲೇ ಭಾರತ ಭರ್ಜರಿ ಮುನ್ನಡೆ ಕಾಯ್ದುಕೊಂಡಿತು. ರಿಷಾಂಕ್ ದೇವಾಡಿ ಅತ್ಯುತ್ತಮ ರೈಡ್ ಮೂಲಕ ಅಂಕ ಭೇಟೆ ಆರಂಭಿಸಿದರು.

ಕೀನ್ಯಾ ಹೋರಾಟ ನೀಡಿದರೂ ಚಾಂಪಿಯನ್ ಭಾರತದ ಮುಂದೆ ಅಂಕಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಫಸ್ಟ್ ಹಾಫ್‌ನಲ್ಲಿ ಭಾರತ 29-5 ಅಂಕಗಳ ಭಾರಿ ಮುನ್ನಡೆ ಕಾಯ್ದುಕೊಂಡಿತು. ದ್ವಿತಿಯಾರ್ಧದಲ್ಲೂ ಭಾರತದ ಆಕ್ರಮಣ ಮುಂದುವರಿಯಿತು. ಸೂಪರ್ ರೈಡ್ ಮೂಲಕ ಅದ್ವಿತೀಯ ಓಟ ಮುಂದುರಿಸಿದ ಭಾರತ ಅರ್ಧಶತಕ ಬಾರಿಸಿತು. 50-15 ಅಂಕಗಳ ಮೂಲಕ ಭಾರತ, ಕೀನ್ಯಾ ತಂಡವನ್ನ ಮಣಿಸಿತು. ಈ ಮೂಲಕ ಅಂತಿಮ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಬಾರಿ ಅಂತರದ ಗೆಲುವು ಸಾಧಿಸಿತು. 

click me!