ಫಿಫಾ ವಿಶ್ವಕಪ್ 2018: ಡೆನ್ಮಾರ್ಕ್-ಫ್ರಾನ್ಸ್ ಪಂದ್ಯ ಡ್ರಾ, ಯಾವ ತಂಡಕ್ಕಿದೆ ನಾಕೌಟ್ ಅವಕಾಶ?

First Published Jun 26, 2018, 9:53 PM IST
Highlights

ಡೆನ್ಮಾರ್ಕ್ ಹಾಗೂ ಫ್ರಾನ್ಸ್ ನಡುವಿನ ಪಂದ್ಯ ಡ್ರಾದಿಂದ ಯಾರು ನಾಕೌಟ್ ಹಂತ ಪ್ರವೇಶಿಸಲಿದ್ದಾರೆ ಅನ್ನೋ ಕುತೂಹಲ ಈಗ ಮನೆಮಾಡಿದೆ. ಹಾಗಾದರೆ ಡಿ ಗುಂಪಿನಿಂದ ನಾಕೌಟ್‌ಗೆ ಲಗ್ಗೆ ಇಡೋ ತಂಡಗಳು ಯಾವುದು? ಇಲ್ಲಿದೆ ವಿವರ.

ರಷ್ಯಾ(ಜೂ.26): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ಹಾಗೂ ಡೆನ್ಮಾರ್ಕ್ ನಡುವಿನ ಪಂದ್ಯ ಗೋಲಿಲ್ಲದೆ ಡ್ರಾನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ಡಿ ಗುಂಪಿನ ನಾಕೌಟ್ ಪ್ರವೇಶ ಮತ್ತಷ್ಟು ಕಗ್ಗಂಟಾಗಿದೆ.

ಬಲಿಷ್ಠ ಫ್ರಾನ್ಸ್ ಮೊದಲಾರ್ಧದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 72 ಪ್ರತಿಶತ ಬಾಲ್ ಪೊಸಿಶನ್ ಇಟ್ಟುಕೊಂಡ ಫ್ರಾನ್ಸ್, 5 ಶಾಟ್ಸ್ ಗಳನ್ನ ಪ್ರಯತ್ನಿಸಿತು. ಫ್ರಾನ್ಸ್  ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದರೂ, ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಡೆನ್ಮಾರ್ಕ್ ಬಲಿಷ್ಠ ಡಿಫೆಂಡರ್‌ಗಳಿಂದ ಮೊದಲಾರ್ಧ ಗೋಲಿಲ್ಲದೆ ಅಂತ್ಯವಾಯಿತು.

ದ್ವಿತಿಯಾರ್ಧದಲ್ಲಿ ಉಭಯ ತಂಡಗಳು ಮುನ್ನಡೆಗಾಗಿ ತೀವ್ರ ಹೋರಾಟ ನಡೆಸಿತು. ಆದರೆ ಗೋಲು ಮಾತ್ರ ದಾಖಲಾಗಲಿಲ್ಲ. ಹೀಗಾಗಿ ಡೆನ್ಮಾರ್ಕ್ ಹಾಗೂ ಫ್ರಾನ್ಸ್ ನಡುವಿನ ಪಂದ್ಯ ಗೋಲಿಲ್ಲದೇ ಡ್ರಾನಲ್ಲಿ ಅಂತ್ಯಗೊಂಡಿತು. ಡ್ರಾ ಫಲಿತಾಂಶದಿಂದ ಬಲಿಷ್ಠ ಫ್ರಾನ್ಸ್ ತಂಡಕ್ಕೆ ನಿರಾಸೆಯಾಗಿದೆ. ಸದ್ಯ ನಾಕೌಟ್ ಹಂತಕ್ಕೆ ಪ್ರವೇಶಿಸಲು ಫ್ರಾನ್ಸ್ ತಂಡ ಡಿ ಗುಂಪಿನ ರನ್ನರ್ ಅಪ್ ತಂದೊಂದಿಗೆ ಪಂದ್ಯ ಆಡಬೇಕಿದೆ. 

click me!