ಕಬಡ್ಡಿ ಮಾಸ್ಟರ್ಸ್: ಪಾಕಿಸ್ತಾನ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ

Published : Jun 25, 2018, 10:29 PM IST
ಕಬಡ್ಡಿ ಮಾಸ್ಟರ್ಸ್: ಪಾಕಿಸ್ತಾನ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಸಾರಾಂಶ

ದುಬೈ ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಮೊದಲ ಸುತ್ತಿನಲ್ಲಿ ಪಾಕಿಸ್ತಾನ ತಂಡವನ್ನ ಮಣಿಸಿದ್ದ ಭಾರತ, ಇದೀಗ 2ನೇ ಮುಖಾಮುಖಿಯಲ್ಲೂ ಪಾಕ್ ತಂಡವನ್ನ ಬಗ್ಗುಬಡಿದಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ದುಬೈ(ಜೂ.25): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸತತ 2ನೇ ಗೆಲುವು ದಾಖಲಿಸಿದೆ. ಮೊದಲ ಮುಖಾಮುಖಿಯಲ್ಲಿ 36-20 ಅಂಕಗಳ ಗೆಲುವು ಸಾಧಿಸಿದ್ದ ಭಾರತ ಇದೀಗ 2ನೇ ಮುಖಾಮುಖಿಯಲ್ಲಿ 47-17 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ.

ಫಸ್ಟ್ ಹಾಫ್‌ನಲ್ಲಿ ಮೊದಲು ರೈಡ್ ಆರಂಭಿಸಿದ ಪಾಕಿಸ್ತಾನ ಬರೀಗೈಯಲ್ಲಿ ವಾಪಾಸ್ಸಾಯಿತು. ಆದರೆ ಭಾರತ ತನ್ನ ಮೊದಲ ರೈಡ್‌ನಲ್ಲೇ 3 ಅಂಕ ಪಡೆಯೋ ಮೂಲಕ ಸೂಪರ್ ರೈಡ್ ಪ್ರಶಂಸೆಗೆ ಪಾತ್ರವಾಯಿತು.

ನಾಯಕ ಅಜಯ್ ಠಾಕೂರ್, ರೋಹಿತ್ ಕುಮಾರ್ ,ರಿಷಾಂಕ್ ದೇವಾಡಿಗ ಸೇರಿದಂತೆ ಭಾರತೀಯ ರೈಡ್‌ನಿಂದ ಪಾಕಿಸ್ತಾನ ಸುಸ್ತಾಯಿತು. ಮೊದಲಾರ್ಧದ ಅಂತ್ಯದಲ್ಲಿ ಭಾರತ 18-9 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ದ್ವಿತಿಯಾರ್ಧದಲ್ಲೂ ಭಾರತ ಪರಾಕ್ರಮ ಮುಂದುವರೆಯಿತು. ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ 41-17 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪಾಕಿಸ್ತಾನ ತಂಡವನ್ನ 2ನೇ ಬಾರಿ ಸೋಲಿಸಿ ಸಂಭ್ರಮಿಸಿತು. ಗೆಲುವಿನ ಅಲೆಯಲ್ಲಿರುವ ಭಾರತ ದುಬೈ ಮಾಸ್ಟರ್ಸ್ ಕಬಡ್ಡಿ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿಗೆ ವಿದಾಯ ಹೇಳಿದ ಆರ್‌ಸಿಬಿ, ತವರಿನ ಪಂದ್ಯಗಳಿಗೆ ಛತ್ತೀಸ್‌ಗಢದ ರಾಯ್ಪುರ ಆತಿಥ್ಯ ಖಚಿತಪಡಿಸಿದ ಫ್ರಾಂಚೈಸಿ!
ಡಿವೋರ್ಸ್ ಬಳಿಕ ಯುಜುವೇಂದ್ರ ಚಹಲ್, ಧನಶ್ರೀ ವರ್ಮಾ ಮತ್ತೆ ಒಂದಾಗ್ತಾರಾ? ಮೌನ ಮುರಿದ ಚಹಲ್!