ಫಿಫಾ ವಿಶ್ವಕಪ್ 2018 : ಅಂತಿಮ ನಿಮಿಷದಲ್ಲಿ ಸೌದಿಗೆ ಒಲಿದ ಗೆಲುವು

Published : Jun 25, 2018, 09:51 PM ISTUpdated : Jun 25, 2018, 09:53 PM IST
ಫಿಫಾ ವಿಶ್ವಕಪ್ 2018 : ಅಂತಿಮ ನಿಮಿಷದಲ್ಲಿ ಸೌದಿಗೆ ಒಲಿದ ಗೆಲುವು

ಸಾರಾಂಶ

ಇನೇನು ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಬೇಕು ಅನ್ನುವಷ್ಟರಲ್ಲೇ ಬಿರುಗಾಳಿಯಂತೆ ಬಂದ ಸೌದಿ ಅರೇಬಿಯಾ ಅಲ್ ದವ್ಸಾರಿ ಮಿಂಚಿನ ಗೋಲು ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಈ ಮಹತ್ವದ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ರಷ್ಯಾ(ಜೂ.25): ಈಜಿಪ್ಟ್ ವಿರುದ್ಧ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಸೌದಿ ಅರೇಬಿಯಾ ರೋಚಕ ಗೆಲುವು ದಾಖಲಿಸಿದೆ. 2-1 ಅಂತರದಲ್ಲಿ ಗೆಲುವು ಸಾಧಿಸಿದ ಸೌದಿ ಅರೇಬಿಯಾ ಮೈದಾನದಲ್ಲೇ ಸಂಭ್ರಮಾಚರಣೆ ನಡೆಸಿತು.

ಫಸ್ಟ್ ಹಾಫ್‌ನಲ್ಲಿ ರೋಚಕ ಹೋರಾಟ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಈಜಿಪ್ಟ್ 22ನೇ ನಿಮಿಷದಲ್ಲಿ ಮೊದಲ ಗೋಲು ಸಿಡಿಸಿತು. ಈಜಿಪ್ಟ್ ತಂಡದ ಸ್ಟಾರ್ ಪ್ಲೇಯರ್ ಮೊಹಮ್ಮದ ಸಲಾಹ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು.

ಮೊದಲಾರ್ಧದ ಅಂತ್ಯದಲ್ಲಿ ಸೌದಿ ಅರೇಬಿಯಾ ತಿರುಗೇಟು ನೀಡಿತು. ಪೆನಾಲ್ಟಿ ಅವಕಾಶದ ಮೂಲಕ ಸಲ್ಮಾನ್ ಅಲ್ ಫರಾಜ್ ಗೋಲು ಬಾರಿಸೋ ಮೂಲಕ 1-1 ಅಂತರದಲ್ಲಿ ಸಮಭಲ ಮಾಡಿದರು.

ದ್ವಿತಿಯಾರ್ಧದಲ್ಲಿ ಸೌದಿ ಅರೇಬಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 65 ಪ್ರತಿಶತ ಬಾಲ್ ಪೊಸಿಶನ್ ಇಟ್ಟುಕೊಂಡ ಸೌದಿ ಗೆಲುವಿಗಾಗಿ ಹೋರಾಟ ನಡಡೆಸಿತು. ಆದರೆ ಗೋಲು ಮಾತ್ರ ದಾಖಲಾಗಲಿಲ್ಲ. ಇನ್ನೇನು ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಬೇಕು ಅನ್ನುವಷ್ಚರಲ್ಲೇ ಸೌದಿ ಮ್ಯಾಜಿಕ್ ಮಾಡಿತು.   90+5ನೇ ನಿಮಿಷದಲ್ಲಿ ಸಲೀಮ್ ಅಲ್ ದವ್ಸಾರಿ ಗೋಲು ಸಿಡಿಸಿದ ಗೋಲಿನಿಂದ ಸೌದಿ ಅರೇಬಿಯಾ 2-1 ಅಂತರದಲ್ಲಿ ಗೆಲುವು ಸಾಧಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿಗೆ ವಿದಾಯ ಹೇಳಿದ ಆರ್‌ಸಿಬಿ, ತವರಿನ ಪಂದ್ಯಗಳಿಗೆ ಛತ್ತೀಸ್‌ಗಢದ ರಾಯ್ಪುರ ಆತಿಥ್ಯ ಖಚಿತಪಡಿಸಿದ ಫ್ರಾಂಚೈಸಿ!
ಡಿವೋರ್ಸ್ ಬಳಿಕ ಯುಜುವೇಂದ್ರ ಚಹಲ್, ಧನಶ್ರೀ ವರ್ಮಾ ಮತ್ತೆ ಒಂದಾಗ್ತಾರಾ? ಮೌನ ಮುರಿದ ಚಹಲ್!