
ಹೈದರಾಬಾದ್(ನ.08): ಭಾರತದ ಬ್ಯಾಡ್ಮಿಂಟನ್‌ನ ಯಶಸ್ವಿ ಮಹಿಳಾ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಬೇರ್ಪಡಲು ನಿರ್ಧರಿಸಿದೆ.
ಇಬ್ಬರು ಆಟಗಾರ್ತಿಯರ ಸಮ್ಮತಿಯಿಂದಲೇ ವಿದಾಯ ಹೇಳುತ್ತಿರುವುದಾಗಿ ಜ್ವಾಲಾ ಗುಟ್ಟಾ ತಿಳಿಸಿದ್ದಾರೆ.
ಜ್ವಾಲಾ ಮತ್ತು ಪೊನ್ನಪ್ಪ ಜೋಡಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿತ್ತು. ಅಲ್ಲದೇ ಏಷ್ಯಾ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದಾರೆ.
ಕಳೆದ ಆಗಷ್ಟ್'ನಲ್ಲಿ ತೆರೆಕಂಡ ರಿಯೊ ಒಲಿಂಪಿಕ್ಸ್'ನಲ್ಲಿ ಜ್ವಾಲಾ-ಪೊನ್ನಪ್ಪ ಜೋಡಿ ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ತೀವ್ರ ನಿರಾಸೆ ಅನುಭವಿಸಿತ್ತು.
ನನ್ನ ಹಾಗೂ ಜ್ವಾಲಾ ಹಲವಾರು ಬಾರಿ ಉತ್ತಮ ಜೊತೆಯಾಟವಾಡಿದ್ದೇವೆ. ಆದರೆ ಹೊಸ ಆರಂಭಕ್ಕಾಗಿ ನಾವಿಬ್ಬರು ಸಮ್ಮತಿಯಿಂದಲೇ ಬೇರ್ಪಡುತ್ತಿದ್ದೇವೆ ಎಂದು ಕನ್ನಡತಿ ಅಶ್ವಿನಿ ಪೊನ್ನಪ್ಪ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.