ಬ್ಯಾಟ್ ಮೇಲೆ ಅಶ್ಲೀಲ ಪದ: ವಿವಾದ ಮೈ ಮೇಲೆಳೆದುಕೊಂಡ ಬಟ್ಲರ್

Published : Jun 06, 2018, 05:46 PM IST
ಬ್ಯಾಟ್ ಮೇಲೆ ಅಶ್ಲೀಲ ಪದ: ವಿವಾದ ಮೈ ಮೇಲೆಳೆದುಕೊಂಡ ಬಟ್ಲರ್

ಸಾರಾಂಶ

ಐಸಿಸಿ ನಿಯಮಾವಳಿಯ ಪ್ರಕಾರ, ಆಟಗಾರರು ಯಾವುದೇ ರೀತಿಯ ಸಂದೇಶಗಳನ್ನು ಬಟ್ಟೆ ಅಥವಾ ಆಟದ ಪರಿಕರಗಳ ಮೇಲೆ ಬರೆದುಕೊಳ್ಳುವಂತಿಲ್ಲ.

ಲಂಡನ್[ಜೂ.06]: ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಅಜೇಯ 80 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿನ ರೂವಾರಿಯಾಗಿದ್ದ ಜೋಸ್ ಬಟ್ಲರ್, ತಮ್ಮ ಬ್ಯಾಟ್‌ನ ಮೇಲ್ಭಾಗದಲ್ಲಿ ಅಶ್ಲೀಲ ಪದವನ್ನು ಬರೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. 
ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಟೀಕೆಗೆ ಗುರಿಯಾಗಿರುವ ಬಟ್ಲರ್, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಐಸಿಸಿ ನಿಯಮಾವಳಿಯ ಪ್ರಕಾರ, ಆಟಗಾರರು ಯಾವುದೇ ರೀತಿಯ ಸಂದೇಶಗಳನ್ನು ಬಟ್ಟೆ ಅಥವಾ ಆಟದ ಪರಿಕರಗಳ ಮೇಲೆ ಬರೆದುಕೊಳ್ಳುವಂತಿಲ್ಲ.

18 ತಿಂಗಳ ಬಳಿಕ ಇಂಗ್ಲೆಂಡ್ ರಾಷ್ಟ್ರೀಯ ಟೆಸ್ಟ್ ತಂಡ ಕೂಡಿಕೊಂಡಿರುವ ಜೋಸ್ ಬಟ್ಲರ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿದ್ದಾರೆ.
 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ind vs pak ಪಂದ್ಯದಲ್ಲಿ ಭಾವನಾತ್ಮಕ ಕ್ಷಣ: ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ VIDEO
Ind Vs Pak: ನಿಮ್ಮ ವಯಸ್ಸೆಷ್ಟು? ಎಂದು ಕೇಳಿದ ಪಾಕಿಸ್ತಾನಿ ಫ್ಯಾನ್‌! ಭಾರತೀಯ ಅಜ್ಜಿ ಕೊಟ್ಟ ಖಡಕ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ!