ಮುಂಬೈ ನೂತನ ಫೀಲ್ಡಿಂಗ್ ಕೋಚ್ ರೋಡ್ಸ್..?

By Suvarna Web DeskFirst Published Jul 5, 2017, 8:48 PM IST
Highlights

ಜಾಂಟಿ ರೋಡ್ಸ್ ನಿವೃತ್ತಿಯ ಬಳಿಕ 2010ರಿಂದ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಂಬೈ(ಜು.05): ಕ್ರಿಕೆಟ್ ಜಗತ್ತು ಕಂಡ ಅದ್ಭುತ ಕ್ಷೇತ್ರರಕ್ಷಕರಲ್ಲೊಬ್ಬರು ಎಂಬ ಖ್ಯಾತಿಗೆ ಭಾಜನರಾಗಿರುವ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್, ಇದೀಗ ಮುಂಬೈ ತಂಡದ ಫೀಲ್ಡಿಂಗ್ ಕೋಚ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ರೋಡ್ಸ್ ಒಪ್ಪಂದಕ್ಕೆ ಸಹಿ ಹಾಕುವ ವಿಶ್ವಾಸವಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.

‘ಈಗಾಗಲೇ ರೋಡ್ಸ್ ಜತೆ ಮಾತುಕತೆ ನಡೆಸಲಾಗಿದೆ. ನಮ್ಮ ಪ್ರಸ್ತಾಪ ಕುರಿತು ಅವರು ಉತ್ಸಾಹ ತೋರಿದ್ದು, ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ’ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

‘12 ವರ್ಷದೊಳಗಿನ ತಂಡದಿಂದ ಹಿಡಿದು ರಣಜಿ ಆಟಗಾರರ ತನಕ ಎಲ್ಲಾ ವರ್ಗದ ಆಟಗಾರರಿಗೂ ರೋಡ್ಸ್ ಮಾರ್ಗದರ್ಶನ ನೀಡಲಿದ್ದಾರೆ. ಅವರು ನಮ್ಮ ಆಟಗಾರರಿಗೆ 80ರಿಂದ 100 ದಿನಗಳ ಕಾಲ ತರಬೇತಿ ನೀಡಬೇಕೆಂದು ನಾವು ಬಯಸಿದ್ದೇವೆ’ ಎಂದವರು ಹೇಳಿದ್ದಾರೆ.

ಒಂದುವೇಳೆ ಜಾಂಟಿ ರೋಡ್ಸ್ ಮುಂಬೈ ಕ್ರಿಕೆಟ್ ಸಂಸ್ಥೆಯೊಂದಗಿಗೆ ಒಪ್ಪಂದಕ್ಕೆ ಸಹಿ ಹಾಕಿದರೆ, ಮುಂಬೈ ಯುವ ಕ್ರಿಕೆಟಿಗರು ವಿಶ್ವದರ್ಜೆಯ ಫೀಲ್ಡರ್ ಜೊತೆಗೆ ಕಲಿಯುವ ಅವಕಾಶ ದೊರೆಯಲಿದೆ.

ಜಾಂಟಿ ರೋಡ್ಸ್ ನಿವೃತ್ತಿಯ ಬಳಿಕ 2010ರಿಂದ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದಷ್ಟೇ ಅಲ್ಲದೇ ಮುಂಬೈ ಮೂಲದ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗರಾದ ಜಹೀರ್ ಖಾನ್ ಹಾಗೂ ಅಜಿತ್ ಅಗರ್ಕರ್ ಅವರುಗಳಿಂದ ವಿವಿಧ ಕಾರ್ಯಾಗಾರವನ್ನು ನಡೆಸುವ ಆಲೋಚನೆಯನ್ನು ಮುಂಬೈ ಕ್ರಿಕೆಟ್ ಸಂಸ್ಥೆ ಹೊಂದಿದೆ ಎನ್ನಲಾಗುತ್ತಿದೆ.  

click me!