ಕೆರಿಬಿಯನ್ ಪಡೆಯ ವಿಶ್ವಕಪ್ ನೇರ ಪ್ರವೇಶದ ಕನಸು ಭಗ್ನ..!

Published : Sep 20, 2017, 08:58 AM ISTUpdated : Apr 11, 2018, 12:47 PM IST
ಕೆರಿಬಿಯನ್ ಪಡೆಯ ವಿಶ್ವಕಪ್ ನೇರ ಪ್ರವೇಶದ ಕನಸು ಭಗ್ನ..!

ಸಾರಾಂಶ

ನೇರ ಅರ್ಹತೆಗೆ ಕೆರಿಬಿಯನ್ನರು ಸರಣಿಯನ್ನು 5-0 ಗೆಲ್ಲಬೇಕಿತ್ತು. ಇದೀಗ ವಿಶ್ವಕಪ್‌'ನಲ್ಲಿ ಆಡಲು ವಿಂಡೀಸ್ ಅರ್ಹತಾ ಸುತ್ತಿನಲ್ಲಿ ಆಡಬೇಕಿದೆ.

ಲಂಡನ್(ಸೆ.20): 2019ರ ಐಸಿಸಿ ಏಕದಿನ ವಿಶ್ವಕಪ್‌'ಗೆ ನೇರ ಅರ್ಹತೆ ಪಡೆಯುವ ವೆಸ್ಟ್‌'ಇಂಡೀಸ್ ಕನಸು ಭಗ್ನಗೊಂಡಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವಿಂಡೀಸ್ 7 ವಿಕೆಟ್ ಸೋಲು ಕಂಡಿದೆ. ನೇರ ಅರ್ಹತೆಗೆ ಕೆರಿಬಿಯನ್ನರು ಸರಣಿಯನ್ನು 5-0 ಗೆಲ್ಲಬೇಕಿತ್ತು. ಇದೀಗ ವಿಶ್ವಕಪ್‌'ನಲ್ಲಿ ಆಡಲು ವಿಂಡೀಸ್ ಅರ್ಹತಾ ಸುತ್ತಿನಲ್ಲಿ ಆಡಬೇಕಿದೆ.

ಮಳೆಯಿಂದಾಗಿ ಪಂದ್ಯವನ್ನು ತಲಾ 42 ಓವರ್‌'ಗ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 204 ರನ್ ಗಳಿಸಿತ್ತು. ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌'ಗೆ ಜಾನಿ ಬೇರ್‌'ಸ್ಟೋ ಆಸರೆಯಾದರು. ಏಕದಿನ ಕ್ರಿಕೆಟ್‌'ನಲ್ಲಿ ಚೊಚ್ಚಲ ಶತಕ ಸಿಡಿಸಿದ ಬೇರ್‌'ಸ್ಟೋ ಸರಣಿಯಲ್ಲಿ ಇಂಗ್ಲೆಂಡ್‌'ಗೆ 1-0 ಮುನ್ನಡೆ ಒದಗಿಸಿದರು. ನಾಯಕ ಜೋ ರೂಟ್ ಅರ್ಧಶತಕ ಬಾರಿಸಿದರೆ, ಕೊನೆಯಲ್ಲಿ ಬೆನ್ ಸ್ಟೋಕ್ಸ್ ಕೇವಲ 10 ಎಸೆತಗಳಲ್ಲಿ 23 ರನ್ ಸಿಡಿಸಿದರು. ಬೇರ್‌'ಸ್ಟೋ 97 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು.

ಕೇವಲ 30.5 ಓವರ್‌'ಗಳಲ್ಲಿ ಇಂಗ್ಲೆಂಡ್ ಗುರಿ ಮುಟ್ಟಿತು. ಇದಕ್ಕೂ ಮುನ್ನ ವಿಂಡೀಸ್‌'ಗೆ ನಾಯಕ ಜೇಸನ್ ಹೋಲ್ಡರ್ 41, ಕ್ರಿಸ್ ಗೇಲ್ 37 ಹಾಗೂ ಶಾಯ್ ಹೋಪ್ 35 ರನ್ ಆಟ ನೆರವಾಯಿತು. ಸ್ಟೋಕ್ಸ್ 3 ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್: ವಿಂಡೀಸ್ : 204/9(42 ಓ)

(ಹೋಲ್ಡರ್ 41, ಗೇಲ್ 37, ಸ್ಟೋಕ್ಸ್ 43/3)

ಇಂಗ್ಲೆಂಡ್ 210/3(30.5ಓ)

(ಬೇರ್‌'ಸ್ಟೋ 100, ರೂಟ್ 54, ವಿಲಿಯಮ್ಸ್ 50/2)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!