ಜಪಾನ್ ಓಪನ್: ಅರ್ಹತಾ ಸುತ್ತಿನಲ್ಲೇ ಕಶ್ಯಪ್'ಗೆ ಶಾಕ್; ಮಿಂಚಿದ ಸಾತ್ವಿಕ್

By Suvarna Web DeskFirst Published Sep 19, 2017, 10:12 PM IST
Highlights

ಭಾರತದ ಯುವ ಶಟ್ಲರ್ ಸಾತ್ವಿಕ್ ಸಾಯಿರಾಜ್ ಜಪಾನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಟೊಕಿಯೊ(ಸೆ.19): ಭಾರತದ ತಾರಾ ಆಟಗಾರ ಪರುಪಲ್ಲಿ ಕಶ್ಯಪ್ ಅರ್ಹತಾ ಸುತ್ತಿನಲ್ಲೇ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪುರುಷರ ಸಿಂಗಲ್ಸ್‌'ನ ಮೊದಲ ಅರ್ಹತಾ ಪಂದ್ಯದಲ್ಲಿ ಕಶ್ಯಪ್ 21-15, 21-14 ಗೇಮ್‌'ಗಳಿಂದ ಡೆನ್ಮಾರ್ಕ್‌ನ ಎಮಿಲ್ ಹೊಲ್ಸ್ಟ್ ಎದುರು ಗೆಲುವು ಪಡೆದರು. ಆದರೆ ಎರಡನೇ ಅರ್ಹತಾ ಪಂದ್ಯದಲ್ಲಿ ಕಶ್ಯಪ್ 11-21, 21-18, 14-21 ಗೇಮ್‌'ಗಳಿಂದ ಜಪಾನ್‌'ನ ಯು ಲರಾಶಿ ಎದುರು ಸೋಲುಂಡರು.

ಮಿಂಚಿನಾಟ ಪ್ರದರ್ಶಿಸಿದ ಸಾತ್ವಿಕ್:

ಭಾರತದ ಯುವ ಶಟ್ಲರ್ ಸಾತ್ವಿಕ್ ಸಾಯಿರಾಜ್ ಜಪಾನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಇಂದು ನಡೆದ ಅರ್ಹತಾ ಸುತ್ತಿನಲ್ಲಿ 17 ವರ್ಷದ ಸಾತ್ವಿಕ್ ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ಚಿರಾಗ್ ಶೆಟ್ಟಿಯೊಂದಿಗೆ ಪುರುಷರ ಡಬಲ್ಸ್‌ನಲ್ಲಿ 2 ಗೆಲುವು ಸಾಧಿಸಿ ಪ್ರಧಾನ ಸುತ್ತಿಗೇರಿದರೆ, ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಅವರೊಂದಿಗೆ 2 ಪಂದ್ಯಗಳಲ್ಲಿ ಜಯಿಸಿದರು.

click me!