ಬುಮ್ರಾ ಏಷ್ಯಾ ಸಾಮ್ರಾಟ: ದಿಗ್ಗಜರು ಮಾಡಲಾಗದ ಸಾಧನೆ ಇದೀಗ ಬುಮ್ರಾ ತೆಕ್ಕೆಗೆ

By Web Desk  |  First Published Aug 26, 2019, 5:32 PM IST

ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ವಿಂಡೀಸ್ ವಿರುದ್ಧ ಸಿಡಿಲಬ್ಬರದ ಬೌಲಿಂಗ್ ನಡೆಸುವ ಮೂಲಕ ಭಾರತ ತಂಡಕ್ಕೆ ಸುಲಭ ಗೆಲುವು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಂಡೀಸ್ ಎದುರು 5 ವಿಕೆಟ್ ಪಡೆಯುವುರೊಂದಿಗೆ ಏಷ್ಯಾ ತಂಡದ ದಿಗ್ಗಜ ಬೌಲರ್‌ಗಳು ಮಾಡಲಾಗದ ದಾಖಲೆಯನ್ನು ಬುಮ್ರಾ ನಿರ್ಮಿಸಿದ್ದಾರೆ. ಅಷ್ಟಕ್ಕೂ ಏನದು ದಾಖಲೆ..? ನೀವೇ ನೋಡಿ..


ಬೆಂಗಳೂರು[ಆ.26]: ಟೀಂ ಇಂಡಿಯಾ ನಂ.1 ವೇಗಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತರಗೆಲೆಗಳಂತೆ ಉದುರಿಹೋದ ವೆಸ್ಟ್ ಇಂಡೀಸ್ ತಂಡ ಎರಡನೇ ಇನಿಂಗ್ಸ್’ನಲ್ಲಿ ಕೇವಲ 100 ರನ್ ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತ ತಂಡ 318 ರನ್’ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ. 

ಮೊದಲ ಟೆಸ್ಟ್ ನಲ್ಲಿ ವಿಂಡೀಸ್ ಬಗ್ಗುಬಡಿದ ಟೀಂ ಇಂಡಿಯಾ

Latest Videos

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್’ನಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕೇವಲ 7 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಏಷ್ಯಾದ ದಿಗ್ಗಜ ಬೌಲರ್’ಗಳೂ ಮಾಡಲಾಗದ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ನೂರಾರು ಟೆಸ್ಟ್ ಪಂದ್ಯವನ್ನಾಡಿದ ಮುತ್ತಯ್ಯ ಮುರುಳೀಧರನ್, ವಾಸೀಂ ಅಕ್ರಂ, ಚಮಿಂಡ ವಾಸ್, ಅನಿಲ್ ಕುಂಬ್ಳೆ ಅವರಂತಹ ದಿಗ್ಗಜ ಬೌಲರ್’ಗಳು ಮಾಡಲಾಗದ ಸಾಧನೆಯನ್ನು ಕೇವಲ 11 ಪಂದ್ಯಗಳಲ್ಲೇ ಬುಮ್ರಾ ಮಾಡಿ ಪೂರೈಸಿದ್ದಾರೆ. ಈ ಏಷ್ಯಾದ ಚಾಂಪಿಯನ್ ಆಗಿ ಬುಮ್ರಾ ಹೊರಹೊಮ್ಮಿದ್ದಾರೆ. 

ಒಂದು ವಿಕೆಟ್, 3 ಅಪರೂಪದ ದಾಖಲೆ: ಇದು ಬುಮ್ರಾ ಮ್ಯಾಜಿಕ್..!

ಅಷ್ಟಕ್ಕೂ ಏನದು ದಾಖಲೆ..?

ಕಳೆದ ವರ್ಷವಷ್ಟೇ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ ಬುಮ್ರಾ ತಾವಾಡಿದ ಎಲ್ಲಾ ವಿದೇಶಿ ಪ್ರವಾಸಲ್ಲೂ 5+ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ 5+ ವಿಕೆಟ್ ಪಡೆದ ಏಷ್ಯಾದ ಮೊದಲ ಬೌಲರ್ ಎನ್ನುವ ಅಪರೂಪದ ದಾಖಲೆ ಇದೀಗ ಬುಮ್ರಾ ಪಾಲಾಗಿದೆ. 

ಟೀಂ ಇಂಡಿಯಾ ಸೀಮಿತ ಓವರ್’ಗಳ ತಂಡದ ಡೆತ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಬುಮ್ರಾ, ಕೇವಲ ಒಂದು ವರ್ಷದ ಅವಧಿಯಲ್ಲಿ ರೆಡ್ ಬಾಲ್ ಕ್ರಿಕೆಟ್’ನಲ್ಲೂ ಕಮಾಲ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್, ಟಿ20 ಹಾಗೂ ಏಕದಿನ ಕ್ರಿಕೆಟ್’ನಲ್ಲಿ 50+ ವಿಕೆಟ್ ಪಡೆದ ಭಾರತದ ಮೊದಲ ವೇಗದ ಬೌಲರ್ ಎನ್ನುವ ದಾಖಲೆಗೂ ಬುಮ್ರಾ ಪಾತ್ರರಾಗಿದ್ದರು.  
 

click me!