ಜಪಾನ್‌ ಓಪನ್‌ : ಸಾಯಿ ಪ್ರಣೀತ್‌ ಶುಭಾರಂಭ

Published : Jul 24, 2019, 11:11 AM IST
ಜಪಾನ್‌ ಓಪನ್‌ : ಸಾಯಿ ಪ್ರಣೀತ್‌ ಶುಭಾರಂಭ

ಸಾರಾಂಶ

ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳು ಶುಭಾರಂಭ ಮಾಡಿದ್ದಾರೆ. ಬಿ. ಸಾಯಿ ಪ್ರಣೀತ್‌, ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ ಸಾಯಿರಾಜ್‌ ಜೋಡಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಟೋಕಿಯೋ(ಜು.24): ಭಾರತದ ಶಟ್ಲರ್‌ ಬಿ. ಸಾಯಿ ಪ್ರಣೀತ್‌, ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ ಸಾಯಿರಾಜ್‌ ಜೋಡಿ, ಇಲ್ಲಿ ಮಂಗಳವಾರದಿಂದ ಆರಂಭವಾಗಿರುವ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ. 

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಮೇಲೆ ಕಣ್ಣಿಟ್ಟ ಸಿಂಧು

ಪುರುಷರ ಸಿಂಗಲ್ಸ್‌ನಲ್ಲಿ ಶ್ರೇಯಾಂಕ ರಹಿತ ಪ್ರಣೀತ್‌, ಜಪಾನ್‌ನ ಕೆಂಟೊ ನಿಶಿಮೊಟೊ ವಿರುದ್ಧ 21-17, 21-13 ಗೇಮ್‌ ಗಳಲ್ಲಿ ಗೆಲುವು ಸಾಧಿಸಿದರು ಪ್ರಣೀತ್‌, ಕೇವಲ 42 ನಿಮಿಷಗಳ ಆಟದಲ್ಲಿ ಜಪಾನ್‌ ಶಟ್ಲರ್‌ ರನ್ನು ಮಣಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ, ಜರ್ಮನಿಯ ಮಾರ್ವಿನ್‌ ಸೀಡಲ್‌, ಲಿಂಡಾ ಎಫ್ಲೆರ್‌ ಜೋಡಿ ಎದುರು 21-14, 21-19 ಗೇಮ್‌ಗಳಲ್ಲಿ ಜಯ ಪಡೆದು 2ನೇ ಸುತ್ತು ಪ್ರವೇಶಿಸಿದರು.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸುಮಿತ್‌ ರೆಡ್ಡಿ ಜೋಡಿ, ಮಲೇಷ್ಯಾದ ಗೊಹ್‌ ಸ್ಜೆ ಫೀ ಮತ್ತು ನೂರ್‌ ಇಜುದ್ದೀನ್‌ ಜೋಡಿ ವಿರುದ್ಧ 12-21, 16-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಭಾರತದ ತಾರಾ ಶಟ್ಲರ್‌ ಗಳಾದ ಸಿಂಧು, ಕಿದಂಬಿ ಶ್ರೀಕಾಂತ್‌ ಬುಧವಾರ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಆಡಲಿದ್ದಾರೆ.

ಹಿಂದೆ ಸರಿದ ಸೈನಾ: ಪಂದ್ಯ ಆರಂಭಕ್ಕೆ ಕೊನೆಯ ನಿಮಿಷಗಳಿದ್ದಾಗ ಸೈನಾ ನೆಹ್ವಾಲ್‌ ಹಿಂದೆ ಸರಿದರು. ಗಾಯದ ಸಮಸ್ಯೆ ಉಲ್ಬಣಿಸಿದ್ದರಿಂದ ಸೈನಾ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ತಿಂಗಳು ಆರಂಭವಾಗಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿರುವುದಾಗಿ ಸೈನಾ ಹೇಳಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!