
ಮುಂಬೈ(ಮಾ.08): ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವಿಜಯ ಸಾಧಿಸಲು ಕಾರಣರಾದ ಭಾರತ ತಂಡದ ಬೌಲರ್'ಗಳಾದ ರವೀಂದ್ರ ಜಡೇಜಾ ಹಾಗೂ ಆರ್.ಅಶ್ವಿನ್ ಅವರಿಗೆ ವಿಶ್ವ ರಾಂಕಿಂಗ್'ನಲ್ಲಿ ಶ್ರೇಯ ಲಭಿಸಿದೆ.
ಐಸಿಸಿ ಬಿಡುಗಡೆ ಮಾಡಿರುವ ರಾಂಕಿಂಗ್ ಪಟ್ಟಿಯಲ್ಲಿ ಇಬ್ಬರು ಸ್ಪಿನ್ನರ್ ಜೋಡಿ ತಲಾ 892 ಅಂಕ ಪಡೆದು ನಂ.1 ಬೌಲರ್ ಸ್ಥಾನ ಪಡೆದಿದ್ದಾರೆ. ಈ ಬಾರಿ 2ನೇ ಸ್ಥಾನ ಯಾರಿಗೂ ಲಭಿಸಿಲ್ಲ. ಮೂರನೇ ಸ್ಥಾನದಲ್ಲಿ ಆಸೀಸ್'ನ ಹ್ಯಾಝಲ್ವು'ಡ್ 863 ಅಂಕ ಪಡೆದು ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾದ ಮತ್ತೊಬ್ಬ ವೇಗದ ಬೌಲರ್ ಮಿಷಲ್ ಸ್ಟಾರ್ಕ್ 757 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ.
ಜಡೇಜಾ 2ನೇ ಟೆಸ್ಟ್'ನ ಮೊದಲ ಇನ್ನಿಂಗ್ಸ್'ನಲ್ಲಿ 6 ವಿಕೇಟ್ ಪಡೆದಿದ್ದರೆ ಅಶ್ವಿನ್ ದ್ವಿತೀಯ ಇನ್ನಿಂಗ್ಸ್'ನಲ್ಲಿ 6 ವಿಕೇಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎರಡೂ ಇನ್ನಿಂಗ್ಸ್'ನಲ್ಲಿಯೂ ಕಳಪೆ ಪ್ರದರ್ಶನ ನೀಡಿದರೂ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ರಾಂಕಿಂಗ್'ನಲ್ಲಿ 847 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಮತ್ತೊಬ್ಬ ಬ್ಯಾಟ್ಸ್'ಮೆನ್ ಚೇತೇಶ್ವರ ಪೂಜಾರ 793 ಅಂಕ ಪಡೆದು 6ನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಕಾಂಗುರೊ ತಂಡದ ನಾಯಕ ಸ್ಟಿವನ್ ಸ್ಮಿತ್'ಗೆ ಲಭಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.