ಭಾರತ-ಪಾಕಿಸ್ತಾನ ನಡುವೆ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಡೇವಿಸ್ ಕಪ್ ಟೂರ್ನಿ ಮುಂದೂಡಲ್ಪಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಆ.23]: ಭಾರತ ಹಾಗೂ ಪಾಕಿಸ್ತಾನ ನಡುವೆ ಇಸ್ಲಮಾಬಾದ್‌ನಲ್ಲಿ ಸೆ.14-15ರಂದು ನಡೆಯಬೇಕಿದ್ದ ಡೇವಿಸ್ ಕಪ್ ಟೆನಿಸ್ ಪಂದ್ಯವನ್ನು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ನವೆಂಬರ್‌ಗೆ ಮುಂದೂಡಿದೆ.
ಡೇವಿಸ್ ಕಪ್: ಭಾರತದ ಪಾಕ್ ಪ್ರವಾಸ ರದ್ದು?
undefined
ಮತ್ತೊಂದು ಸುತ್ತಿನ ಭದ್ರತಾ ಪರಿಶೀಲನೆ ನಡೆಸಿದ ಐಟಿಎಫ್, ಪ್ರಸಕ್ತ ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಇದು ವಿನಾಯಿತಿ ನೀಡಬೇಕಾದ ಸಂದರ್ಭವೆಂದು ಮನಗಂಡಿತು. ತಟಸ್ಥ ಸ್ಥಳಕ್ಕೆ ಪಂದ್ಯ ಸ್ಥಳಾಂತರಿಸಬೇಕು ಅಥವಾ ಮುಂದೂಡಬೇಕೆಂಬ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಮನವಿಗೆ ಐಟಿಎ ಸ್ಪಂದಿಸಿದೆ.
ಪಾಕ್‌ಗೆ ಹೋಗಲ್ಲ: ಭಾರತೀಯ ಟೆನಿಸಿಗರು!
ಡೇವಿಸ್ ಕಪ್ ಟೂರ್ನಿಗೆ ಭಾರತ ಟೆನಿಸ್ ತಂಡ ಪಾಕಿಸ್ತಾನಕ್ಕೆ ತೆರಳಲು ತಮ್ಮದೇನು ಅಭ್ಯಂತರವಿಲ್ಲ ಎಂದು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಭಾರತದ ಕೆಲ ಆಟಗಾರರು ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಲು ಮನವಿ ಮಾಡಿಕೊಂಡಿದ್ದರು. ಇದೀಗ ಟೂರ್ನಿ ಮುಂದೂಡಲ್ಪಟ್ಟಿರುವುದರಿಂದ, ಮುಂದೇನಾಗುತ್ತದೆ ಎನ್ನುವುದನ್ನು ಕಾಲವೇ ಉತ್ತರಿಸುತ್ತದೆ.