
ಮಾಸ್ಕೊ(ಅ.26): 2018 ಫಿಫಾ ಫುಟ್ಬಾಲ್ ವಿಶ್ವಕಪ್'ಗೆ ಇನ್ನೂ ಕೆಲ ಸಮಯ ಬಾಕಿ ಇದೆ. ಆದರೆ ಈಗಾಗಲೇ ಕಾಲ್ಚೆಂಡಿನ ಮಹಾ ಸಮರಕ್ಕೆ ಭಯೋತ್ಪಾದಕರ ಭೀತಿ ಶುರುವಾಗಿದೆ. ಭಯೋತ್ಪಾದಕ ಸಂಸ್ಥೆ ‘ಐಸಿಸ್’ ಫುಟ್ಬಾಲ್ ವಿಶ್ವಕಪ್'ಗೆ ಅಡ್ಡಿಯಾಗುವ ಎಚ್ಚರಿಕೆ ನೀಡಿದೆ.
ಐಸಿಸ್ ಪರ ಸಾಮಾಜಿಕ ಮಾಧ್ಯಮದಲ್ಲಿ ಅರ್ಜೆಂಟೀನಾದ ತಾರಾ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಅವರ ‘ರಕ್ತ ಕಣ್ಣೀರಿನ’ ಚಿತ್ರವೊಂದನ್ನು ಪ್ರಕಟಿಸಲಾಗಿದೆ. ಐಸಿಸ್ ಪತನಕ್ಕೆ ರಷ್ಯಾ ಹೋರಾಟ ನಡೆಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. 2015ರ ನವೆಂಬರ್'ನಲ್ಲಿ ಐಸಿಸ್ ಉಗ್ರರು ಸರಣಿ ಬಾಂಬ್ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಶ್ವಕಪ್ ಲಾಂಛನಕ್ಕೆ ಬೆಂಕಿಯಿಟ್ಟ ಚಿತ್ರಗಳು ಸಹ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಪಂದ್ಯಾವಳಿ ವೇಳೆ ದಾಳಿ ನಡೆಸುವುದಾಗಿಯೂ ಐಸಿಸ್ ಎಚ್ಚರಿಕೆ ನೀಡಿದೆ. 2018ರ ಜೂನ್'ನಲ್ಲಿ ರಷ್ಯಾದ 11 ನಗರಗಳ 12 ತಾಣಗಳಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.