
ವಡೋದರಾ(ಫೆ.23): ಇದೇ ಶನಿವಾರ (ಫೆ.25)ದಿಂದ ಆರಂಭವಾಗುತ್ತಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಗೆ ಬರೋಡಾ ತಂಡವನ್ನು ಪ್ರಕಟಿಸಲಾಗಿದ್ದು, ಪಠಾಣ್ ಸೋದರರು ಮಿಶ್ರಫಲ ಸಿಕ್ಕಂತಾಗಿದೆ.
ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೆ ಉಳಿದ ಇರ್ಫಾನ್'ಗೆ ತಂಡದ ಸಾರಥ್ಯ ಸಿಕ್ಕಿದ್ದರೆ, ಯೂಸುಫ್ ಪಠಾಣ್ ಅವರನ್ನು ಕೈಬಿಡಲಾಗಿದೆ. 2016-17ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಯೂಸುಪ್ ಕೇವಲ 76 ರನ್ ಮಾತ್ರ ಗಳಿಸಿದ್ದರೂ. ಬೌಲಿಂಗ್'ನಲ್ಲೂ ಅಂತ ಹೇಳಿಕೊಳ್ಳುವಂತ ಪ್ರದರ್ಶನ ನೀಡದ ಅವರು ಕೇವಲ 6 ವಿಕೆಟ್ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದರು.
ಯೂಸುಫ್ ಐಪಿಎಲ್'ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ವಾಪಾಸ್ಸಾಗುವ ನಿರೀಕ್ಷೆಯಲ್ಲಿದ್ದರೆ, ಇರ್ಫಾನ್ ವಿಜಯ್ ಹಜಾರೆ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
ಬರೋಡ ತಂಡವು ವಿಜಯ್ ಹಜಾರೆ ಟ್ರೋಫಿಯಲ್ಲಿ ರೈಲ್ವೇಸ್ ತಂಡದ ಎದುರು ಮುಖಾಮುಖಿಯಾಗಲಿದೆ.
ತಂಡ ಇಂತಿದೆ:
ಇರ್ಫಾನ್ ಪಠಾಣ್ (ನಾಯಕ), ದೀಪಕ್ ಹೂಡಾ (ಉಪನಾಯಕ), ರಿಶಿ ಅರೋಥೆ, ಕೇದಾರ್ ದೇವ್‌ಧರ್, ಅಭಿಜಿತ್ ಕರಂಬೇಲ್ಕಾರ್, ಲುಕ್ಮನ್ ಮೇರಿವಾಲ, ಕೃನಾಲ್ ಪಾಂಡ್ಯ, ಮೋನಿಲ್ ಪಟೇಲ್, ಬಾಬಾಶಫಿ ಪಠಾಣ್, ಪಿನಾಲ್ ಶಾ (ವಿಕೆಟ್‌ಕೀಪರ್), ಅಜಿತ್ ಸೇಠ್, ವಿಷ್ಣು ಸೋಲಂಕಿ, ಸ್ವಪ್ನಿಲ್ ಸಿಂಗ್, ಸೋಯೆಬ್ ತೈ, ಆದಿತ್ಯ ವಾಘ್ಮೋಡೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.